ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಯುವಕನೋರ್ವ ಜರ್ಮನಿಯ ಯುವತಿಯನ್ನು ವರಿಸಿದ್ದು, ಹಿಂದೂ ಸಂಪ್ರದಾಯದಂತೆ ಯುವಕನ ಹುಟ್ಟೂರಿನಲ್ಲಿಯೇ ನವಜೋಡಿ ಹಸೆಮಣೆ ಏರಿದ್ದಾರೆ.
ಆಜ್ರಿ ಗ್ರಾಮದ ಕರಿಮನೆ ಸುವರ್ಣ ಹಾಗೂ ಪಂಜು ಪೂಜಾರಿ ದಂಪತಿಯ ಪುತ್ರನಾದ ಚಂದನ್ ಹಾಗೂ ಜರ್ಮನಿಯ ಕಾರಿನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಾಲೂಕಿನ ಚಿತ್ತೇರಿ ಚೌಕಳಿಮಕ್ಕಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಎರಡು ಕಡೆಯ ಬಂಧುಗಳು ಉಪಸ್ಥಿತರಿದ್ದು ನವಜೋಡಿಗಳಿಗೆ ಹಾರೈಸಿದ್ದಾರೆ.
ಚಂದನ್ ಜರ್ಮನಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರೊಂದಿಗೆ ಪ್ರೇಮಾಂಕುರವಾಗಿತ್ತು. ಬಳಿಕ ಎರಡೂ ಕುಟುಂಬಿಕರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.