ಪಾನ್ ಕಾರ್ಡ್ ಕಳೆದು ಹೋದ್ರೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿವುದು ಹೇಗೆ?

Call us

Call us

Call us

Call us

ಭಾರತದಲ್ಲಿ ಪಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿದ್ದರೆ ಪುನಃ ಅರ್ಜಿ ಸಲ್ಲಿಸಬಹುದಾಗಿದೆ.

Call us

Click Here

ಆದಾಯ ತೆರಿಗೆ ಇಲಾಖೆ ಆನ್ ಲೈನ್ ಸೌಲಭ್ಯ ಬಳಸಿಕೊಂಡು ಇನ್ ಸ್ಟೆಂಟ್ ಇ-ಪ್ಯಾನ್ ಅಥವಾ ಡಿಜಿಟಲ್ ಪ್ಯಾನ್ ಕಾರ್ಡ್ ಗೆ ಕೂಡ ಅರ್ಜಿ ಸಲ್ಲಿಸಬಹುದು. ಪಾನ್ ಕಾರ್ಡ್ ಕಳೆದು ಹೋದ ತಕ್ಷಣ ಎಫ್ ಐಆರ್ ಫೈಲ್ ಮಾಡೋದು ಅಗತ್ಯ. ಇದರಿಂದ ಬೇರೆಯವರು ನಿಮ್ಮ ಪಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ.

ಆನ್ ಲೈನ್ ನಲ್ಲಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದು ಹೇಗೆ?

  • ಹಂತ 1: ಅಧಿಕೃತ ವೆಬ್ ಸೈಟ್ tin-nsdl.com ಭೇಟಿ ನೀಡಿ.
  • ಹಂತ 2: ಹೋಮ್ ಪೇಜ್ ನಲ್ಲಿ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ಹಾಗೂ ಪಾನ್ ಕಾರ್ಡ್ ಆಯ್ಕೆ ಮಾಡಿ. ಆಗ ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತದೆ.
  • ಹAತ 3: ಈ ಹೊಸ ಪುಟದಲ್ಲಿ ಕೆಳಕ್ಕೆ ತೆರಳಿ ಹಾಗೂ ‘ರೀ ಪ್ರಿಂಟ್ ಪಾನ್ ಕಾರ್ಡ್’ ಅನ್ನು ಆಯ್ಕೆ ಮಾಡಿ ಅದರಲ್ಲಿ ‘Apply’ ಮೇಲೆ ಕ್ಲಿಕ್ ಮಾಡಿ.
  • ಹಂತ 4: ‘Online PAN Application’ಎಂಬ ಹೊಸ ಪುಟ ಕಾಣಿಸುತ್ತದೆ.
  • ಹಂತ 5: ‘Application type’ಅಡಿಯಲ್ಲಿ ‘Changes or correction in existing PAN data/ Reprint of PAN card’ ಆಯ್ಕೆ ಮಾಡಿ.
  • ಹಂತ 6: ವರ್ಗ ಆಯ್ಕೆ ಮಾಡಿ.
  • ಹಂತ 7: ಎಲ್ಲ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅರ್ಜಿ ಸಲ್ಲಿಸಿ.
  • ಹಂತ 8: ಅರ್ಜಿ ಸಲ್ಲಿಕೆ ಬಳಿಕ ಟೋಕನ್ ಸಂಖ್ಯೆ ಜೊತೆಗೆ ನಿಮ್ಮ ಮನವಿಯನ್ನು ದೃಢೀಕರಿಸುವ ಸಂದೇಶ ಬರುತ್ತದೆ. ಈ ಸಂಖ್ಯೆಯನ್ನು ನಿಮ್ಮ ಭವಿಷ್ಯದ ರೆಫರೆನ್ಸ್ ಗೆ ಇಟ್ಟುಕೊಳ್ಳಿ ಹಾಗೂ ‘Continue with the PAN Application Form’ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಹಂತ 9: ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಆ ಬಳಿಕ ಸಲ್ಲಿಕೆ ಮಾದರಿ (ಡಿಜಿಟಲ್, ಸ್ಕ್ಯಾನ್ಡ್ ಅಥವಾ ಭೌತಿಕ) ಆಯ್ಕೆ ಮಾಡಿ ಹಾಹೂ ‘ವೈಯಕ್ತಿಕ ಮಾಹಿತಿಗಳು’, ‘ಸಂಪರ್ಕ ಹಾಗೂ ಇತgÀ ಮಾಹಿತಿಗಳು’ ಹಾಗೂ ದಾಖಲೆ ಮಾಹಿತಿಗಳನ್ನು ಪೂರ್ಣಗೊಳಿಸಿ. ಆ ಬಳಿಕ ಅರ್ಜಿ ಸಲ್ಲಿಕೆ ಮಾಡಿ.

ಈಗ ಪಾವತಿ ಪುಟ ತೆರೆದುಕೊಳ್ಳುತ್ತದೆ. ಒಮ್ಮೆ ಪಾವತಿ ಮಾಡಿದ ಬಳಿಕ ನಿಮ್ಮ ನಕಲಿ ಪ್ಯಾನ್ ಕಾರ್ಡ್ ಸ್ಟೇಟಸ್ ಅನ್ನು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಸೃಷ್ಟಿಯಾದ 15 ಅಂಕೆಗಳ ಸ್ವೀಕೃತಿ ಸಂಖ್ಯೆ ಬಳಸಿಕೊಂಡು ಪರಿಶೀಲಿಸಬಹುದು.

Leave a Reply

Your email address will not be published. Required fields are marked *

17 + 3 =