ಬೈಂದೂರು: ದೈವಜ್ಞ ಕೇರಿಯ ಶ್ರೀ ನಾಗಜಟ್ಟಿಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ ಸಂಪನ್ನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ದೈವಜ್ಞ ಬ್ರಾಹ್ಮಣ ಸಮಾಜದ ಆರಾಧಿಸಿ ಪೂಜಿಸಿಕೊಂಡು ಬಂದಿರುವ ದೈವಜ್ಞ ಕೇರಿಯಲ್ಲಿರುವ ಶ್ರೀ ನಾಗಜಟ್ಟಿಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕುಂಭಾಭಿಷೇಕ ಮತ್ತು ಸ್ವಪರಿವಾರ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಹಾಗೂ ಸಪರಿವಾರ ಜಟ್ಟಿಗೇಶ್ವರ ದೈವದ ಪುನಃ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕವು ಬುಧವಾರ ಜರುಗಿತು.

Call us

Click Here

ಜ್ಯೋತಿಷಿ ವಿದ್ವಾನ್ ಶ್ರೀ ವಾಸುದೇವ ಜೋಷಿ ಹಾಲಾಡಿ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆಗೆ ಸಹಸ್ರಾರು ಭಕ್ತರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ರವೀಂದ್ರ ಶೇಟ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು ,ಗೌರವಾಧ್ಯಕ್ಷರಾದ ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ್ ಶೇಟ್ ಶಂಕರನಾರಾಯ, ಣ ಯು. ನಾಗರಾಜ ಶೇಟ್ ಉಡುಪಿ, ಬಿ. ಎನ್ .ಸುಬ್ರಮಣ್ಯ ಶೇಟ್ ಬೆಂಗಳೂರು, ಪ್ರಶಾಂತ್ ಶೇಟ್ .ಮಂಗಳೂರು ಉಪಸ್ಥಿತರಿದ್ದರು,

ಶ್ರೀ ನಾಗ ಜಟ್ಟಿಗೇಶ್ವರ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಶೇಟ್ ಸ್ವಾಗತ ಕೋರಿ,ಜೀರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು . ಜೀರ್ಣೋದ್ಧಾರ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು, ಉಪಾಧ್ಯಕ್ಷರಾದ ರವೀಂದ್ರ ಶೇಟ್ , ನಿಶಾಂತ್ ಶೇಟ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೇಟ್, ಖಜಾಂಚಿ ವಿನಾಯಕ ಶೇಟ್ ,ವಲೀೢಶ್ ಶೇಟ್, ಬೆಂಗಳೂರು, ದಿನೇಶ್ ತಗ್ಗರ್ಸೆ ,ಅರ್ಜುನ್ ಶೇಟ್ ಮಂಗಳೂರು, ನರೇಂದ್ರ ಶೇಟ್ ಬೈಂದೂರು,ವಿಮಲೇಟ್ ಶೇಟ್ ಮಂಗಳೂರು, ಕೀರ್ತಿರಾಜ್ ಶೇಟ್ ಬೈಂದೂರು, ಬಿ.ನಾಗರಾಜ್ ಶೇಟ್, ಬೈಂದೂರು .ಅಶೋಕ್ ನಾಗೂರು ಉಪಸ್ಥಿತರಿದ್ದರು,

ಕಾರ್ಯಕ್ರಮ ನಿರ್ವಹಣೆಯನ್ನು ಕಾರ್ಯದರ್ಶಿಯಾದ ನವೀನ್ ಎನ್. ಶೇಟ್ ನಿರ್ವಹಿಸಿ ಧನ್ಯವಾದಗೈದರು. ಸಭಾ ಕಾರ್ಯಕ್ರಮದ ನಂತರ ಸಂಗೀತ ಗಾನ ಸಂಭ್ರಮವನ್ನು ಯು. ನಾಗರಾಜ್ ಶೇಟ್ ಉಡುಪಿ ಅವರ ಬಳಗ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

nineteen + nine =