ಸಂಸ್ಕಾರಗಳ ದಿವ್ಯತೆ, ಜೀವನದ ಭವ್ಯತೆ ಕೃತಿಯನ್ನು ಲೋಕಾರ್ಪಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದಿನದಿಂದ ದಿನಕ್ಕೆ ದೈಹಿಕ, ಮಾನಸಿಕ, ಸಾಮಾಜಿಕವಾಗಿ ದುರ್ಬಲರಾಗುತ್ತಿರುವ ನಾವು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ನಮಗೆ ಉತ್ತಮವಾದ ಕಾರ್ಯ ಸಾಮರ್ಥ್ಯ, ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಹೊಸದೊಂದು ವರ್ಷವನ್ನು ನಿರ್ಮಾಣ ಮಾಡಲು ನೆರವಾಗುವುದು ಎಂದು ಯಳಜಿತ್ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.

Call us

Click Here

ಉಪ್ಪುಂದ ದೇವಕಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಸ್ವರಚಿತ ’ಸಂಸ್ಕಾರಗಳ ದಿವ್ಯತೆ, ಜೀವನದ ಭವ್ಯತೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಉಪನ್ಯಾಸ ನೀಡಿದರು. ಸನಾತನ ಸಂಸ್ಕೃತಿಯು ಮಾನವನ ಸಾಂಸ್ಕೃತಿಕ ಆಧ್ಯಾತ್ಮಿಕ ವ್ಯವಹಾರಿಕ ಉನ್ನತಿಗೆ ಸಹಾಯಕಾರಿಯಾದ ನಮ್ಮದೇ ಜ್ಞಾನ ಸಂಪತ್ತು. ಇದು ಸರ್ವಜನ ಹಿತವನ್ನು ಬಯಸುವ ವಿಪುಲವಾದ ಜ್ಞಾನರಾಶಿ. ಪ್ರಸ್ತುತ ಇಂದಿನ ಶಿಕ್ಷಣದ ಮೂಲಕ ಅಥವಾ ಮಾಧ್ಯಮಗಳ ಮೂಲಕ ಮಕ್ಕಳಿಗೆ ಅವಶ್ಯಕತೆ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬುದು ಸರ್ವವಿಧಿತ. ಆದ್ದರಿಂದ ನಾವು ಇಂತಹ ಅನರ್ಘ್ಯ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಕೊಡುವ ಪ್ರಾಯೋಗಿಕ ಮಾರ್ಗವನ್ನು ಕಂಡುಹಿಡಿಯದಿದ್ದರೆ ಇದು ಕ್ರಮೇಣ ನಶಿಸುತ್ತಾ ಬರುವುದರಲ್ಲಿ ಸಂದೇಹವಿಲ್ಲ ಎಂದರು.

ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲದ ಸಂಸ್ಕೃತಿ ನಮ್ಮದಾಗಿದ್ದು, ಸ್ವಾರ್ಥದ ಮಾಯಾ ಪರದೆಯನ್ನು ಹರಿದು ಅನೇಕತೆಯಲ್ಲಿ ಏಕತೆಯನ್ನು ದರ್ಶಿಸುವ ಸಂಸ್ಕಾರವನ್ನು ನೀಡಿ ಸತ್ಯಾನ್ವೇಷಣೆಯ ಮಾರ್ಗವನ್ನು ತಿಳಿದುಕೊಟ್ಟವರು ನಮ್ಮ ಪೂರ್ವಜರು. ಇದು ಮುಂದುವರಿಸಿಕೊಂಡು ಹೋಗಬೇಕಾದರೆ ನಮ್ಮ ದೇವಾಲಯಗಳಲಿ, ಶ್ರದ್ಧಾ ಕೇಂದ್ರಗಳಲ್ಲಿ ಸಂಸ್ಕೃತಿಯ ಸಂಸ್ಕಾರಗಳನ್ನು ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಆಯಾ ಪ್ರದೇಶದ ಹಿರಿಯರು, ಚಿಂತಕರು, ಅರ್ಚಕರು, ಆಡಳಿತ ಮಂಡಳಿಯವರು ಸಮಾಲೋಚಿಸಿ ಶ್ರದ್ಧಾಕೇಂದ್ರಗಳಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸೇವಾ ಕೇಂದ್ರಗಳನ್ನಾಗಿಸಿಕೊಳ್ಳಬೇಕು. ನಮ್ಮ ಸನಾತನ ಸಂಸ್ಕೃತಿ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ನಮ್ಮ ವರ್ಚಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಅಲ್ಪಸ್ವಲ್ಪವಾದರೂ ನಾವು ಮೊದಲು ಆಚರಣೆಗೆ ತರುವ ಮೂಲಕ ಇತರರಿಗೂ ಆಚರಿಸುವುದಕ್ಕೆ ಪ್ರಚೋದನೆ ನೀಡೋಣ ಎಂದರು.

ಕೃತಿ ರಚನೆಗೆ ಸಹಕಾರ ನೀಡಿದ ಉದ್ಯಮಿ ಯು. ಸದಾನಂದ ಪ್ರಭು ರಾಯಚೂರು, ಲೆಕ್ಕ ಪರಿಶೋಧಕರಾದ ಯು. ರಾಮಚಂದ್ರ ಪ್ರಭು, ರಮೇಶ ಎಸ್. ಪ್ರಭು, ನಿವೃತ್ತ ಬ್ಯಾಂಕ್ ಅಧಿಕಾರಿ ಉದಯ್ ಶ್ಯಾನುಭಾಗ್, ಉದ್ಯಮಿಗಳಾದ ಡಿ. ಗೋಪಾಲಕೃಷ್ಣ ಕಾಮತ್, ಯು. ಶ್ರೀಧರ ಪ್ರಭು, ಯು. ಅಶೋಕ ಪ್ರಭು, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅರ್ಚಕ ಯು. ಚಂದ್ರಶೇಖರ ಭಟ್ ಇದ್ದರು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ಜತೆಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply