ರೋಟರಿ ಝೋನ್ – 1ರ ನಿಯೋಜಿತ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಪೂರ್ವ ತರಬೇತಿ ಕಾರ್ಯಾಗಾರ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಎಂಬುದು ವಿವಿಧ ಕ್ಷೇತ್ರಗಳ ಪರಿಣತರು, ನಾಯಕರ ದಂಡು. ಇಂತಹ ಸಂಸ್ಥೆಯ ಅಧ್ಯಕ್ಷ – ಕಾರ್ಯದರ್ಶಿ ಆಗುವುದೆಂದರೆ ನಮ್ಮೊಳಗಿನ ನಾಯಕತ್ವವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ಇರುವ ಅವಕಾಶ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದರು.

Click Here

Call us

Click Here

ಅವರು ಶನಿವಾರ ಕುಂದಾಪುರ ರೋಟರಿಯ ಕಲೈ ರಾಮಣ್ಣ ರೈ ಮಿನಿ ಹಾಲ್ನಲ್ಲಿ ಜರುಗಿದ ರೋಟರಿ ಜಿಲ್ಲೆ 3182 ಝೋನ್ 1ರ 2024-25ನೇ ಸಾಲಿನ ನಿಯೋಜಿತ ಅಧ್ಯಕ್ಷ ಕಾರ್ಯದರ್ಶಿಗಳಿಗೆ ನಡೆದ ಪೂರ್ವಭಾವಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿಯಲ್ಲಿ ಪದವಿ ಪಡೆಯುವುದೆಂದರೆ ಜನರ ನಡುವೆ ಕೆಲಸ ಮಾಡಲು ಹಾಗೂ ಅವರ ನಿರೀಕ್ಷೆ ತಲುಪಲು ಇರುವ ಅವಕಾಶ. ಅಲ್ಲದೇ ಹೊಸ ಹೊಸ ಅನುಭವಗಳನ್ನು ಪಡೆಯಲು ಇದು ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ಸಂದೀಪ್ ಕುಮಾರ್ ಶೆಟ್ಟಿ, ನಿಯೋಜಿತ ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ, ಮಾಜಿ ವಲಯ ಸೇನಾನಿಗಳಾದ ಜಯಪ್ರಕಾಶ್ ಶೆಟ್ಟಿ, ಆವರ್ಸೆ ಸುಧಾಕರ ಶೆಟ್ಟಿ, ನಿಯೋಜಿತ ವಲಯ ಸೇನಾನಿಗಳಾದ ವೆಂಕಟೇಶ್ ನಾವುಂದ, ಮಹೇಂದ್ರ ಶೆಟ್ಟಿ, ಪ್ರದೀಪ್ ಡಿ.ಕೆ, ಕುಂದಾಪುರ ರೋಟರಿ ಕಾರ್ಯದರ್ಶಿ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.

ನಿಯೋಜಿತ ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ, ವಲಯ ಕಾರ್ಯದರ್ಶಿ ಪ್ರದೀಪ್ ವಾಸ್, ಕುಂದಾಪುರ ರೋಟರಿ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Call us

Call us

ಬಳಿಕ ಕೆ.ಕೆ. ಕಾಂಚನ್, ರವಿರಾಜ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಪ್ರದೀಪ್ ವಾಸ್, ಸತೀಶ್ ಶೇರುಗಾರ್, ಡಾ. ಉಮೇಶ್ ಪುತ್ರನ್ ಅವರು ನಿಯೋಜಿತ ಅಧ್ಯಕ್ಷ – ಕಾರ್ಯದರ್ಶಿಗಳಿಗೆ ರೋಟರಿ ವಿವಿಧ ವಿಭಾಗಗಳ ಕಾರ್ಯಗಳ ಕುರಿತು ತರಬೇತಿ ನೀಡಿದರು.

Leave a Reply