ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಎ.03: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಚರಾಸ್ತಿ ಹಾಗೂ ಸ್ತಿರಾಸ್ತಿಗಳ ವಿವರ ಹೀಗಿದೆ ನೋಡಿ
ಚರಾಸ್ಥಿ:
ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ನಗದು,ಚಿನ್ನ ವಾಹನ ಸೇರಿದಂತೆ ಒಟ್ಟು ರೂ. 31,95,082 ಮೌಲ್ಯದ ಚರಾಸ್ತಿ ಇದ್ದರೇ, ಪತ್ನಿ ಶಾಂತಾ ಅವರ ಬಳಿ 10,29,027 ಮೌಲ್ಯದ ಚರಾಸ್ತಿ ಹಾಗೂ ಮೂವರು ಮಕ್ಕಳು 21,96,401 ಬಳಿ ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು- 64,20,510 ಲಕ್ಷ ಮೌಲ್ಯದ ಚರಾಸ್ತಿ ಇದೆ.
ಕೋಟ ಶ್ರೀನಿವಾಸ್ ಬಳಿ 10 ಗ್ರಾಂ ನ 1 ಚಿನ್ನದ ಉಂಗುರ, ಪತ್ನಿ ಬಳಿ 150 ಗ್ರಾಂ ಚಿನ್ನ-9,57,000 ಮಕ್ಕಳ ಬಳಿ ರೂ. 4,46,700 ಮೌಲ್ಯದ ಚಿನ್ನ ಇದೆ.
ಮಾರುತಿ ಆಲ್ಟೋ ಕಾರು 2006 ಮಾಡೆಲ್- ರೂ1,50,000, ಇನ್ನೋವಾ ಕಾರು 2016 ಮಾಡೆಲ್ – 22,00,000, ಮಗನ ಹೆಸರಿನಲ್ಲಿ ರೂ. 16.5 ಲಕ್ಷ ಮೌಲ್ಯದ ಹೋಂಡಾ ಸಿಟಿ ಕಾರು ಇದೆ.
ಸ್ಥಿರಾಸ್ತಿ (ಭೂಮಿ,ಕೃಷಿಭೂಮಿ ಮತ್ತು ಕಟ್ಟಡ ಸೇರಿ ಸದ್ಯದ ಮಾರುಕಟ್ಟೆ ದರ)
ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ರೂ. 79,95,082 ಮೌಲ್ಯದ ಸ್ತಿರಾಸ್ಥಿ, ಶಾಂತಾ ಅವರ ಬಳಿ 1,62,79,027 ಮೌಲ್ಯದ ಸ್ತಿರಾಸ್ಥಿ, ಮಕ್ಕಳ ಹೆಸರಿನಲ್ಲಿ ರೂ. 51,96,401 ಮೌಲ್ಯದ ಸ್ತಿರಾಸ್ಥಿ ಸೇರಿದಂತೆ ಒಟ್ಟು ರೂ. 2,94,70,510 ಮೌಲ್ಯದ ಸ್ತಿರಾಸ್ಥಿ ಹೊಂದಿದ್ದಾರೆ.
ಸಾಲ:
ಕೋಟ ಶ್ರೀನಿವಾಸ್ ಪೂಜಾರಿ ಅವರು ರೂ. 40,64, 924 ಸಾಲ, ಶಾಂತ ಅವರು ರೂ. 35,43,757 ಹಾಗೂ ಮಗ ಹೆಸರಿನಲ್ಲಿ ರೂ. 28,35,964 ಸಾಲ ಸೇರಿದಂತೆ ಒಟ್ಟು ಒಟ್ಟು ಸಾಲ 1,04,44,645 ಸಾಲವಿದೆ.
ಕೋಟ ಅವರ ಕುಟುಂಬಿಕರಲ್ಲಿ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಒಟ್ಟು 2.92 ಕೋಟಿ ಮೌಲ್ಯದ ಆಸ್ತಿ ಇದೆ. 1.4 ಕೋಟಿ ಸಾಲವಿದೆ.
► ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಸ್ತಿ ಎಷ್ಟು ಗೊತ್ತಾ? – https://kundapraa.com/?p=71632 .