ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2023ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಾಲೇಜಿಗೆ ಒಟ್ಟು ಐದು ರ್ಯಾಂಕ್ ದೊರಕಿವೆ.
ಬಿ.ಎ. ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನಾಗರಾಜ್ ನಾಯಕ್ ಮತ್ತು ಜಯಂತಿ ನಾಯಕ್ ಅವರ ಪುತ್ರಿ ವರೇಣ್ಯ ನಾಯಕ್ ಅವರಿಗೆ ಪ್ರಥಮ ರ್ಯಾಂಕ್ ದೊರೆತಿದೆ.
ಬಿಸಿಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಶಾಜಿ ಜಾರ್ಜ್ ಮತ್ತು ಲಿಟ್ಟಿ ಮೋಲ್ ಅವರ ಪುತ್ರಿ ಸ್ಯಾಂಡ್ರಮೋಲ್ ಶಾಜಿ ಅವರಿಗೆ ದ್ವಿತೀಯ ರ್ಯಾಂಕ್, ಹೆಮ್ಮಾಡಿ ಗ್ರಾಮದ ಕೃಷ್ಣ ಪೂಜಾರಿ ಮತ್ತು ಬೇಬಿ ಪೂಜಾರಿ ಅವರ ಪುತ್ರಿ ಸ್ಮಿತಾ ಅವರಿಗೆ ನಾಲ್ಕನೇ ರ್ಯಾಂಕ್, ಕಿರಿಮಂಜೇಶ್ವರ ಗ್ರಾಮದ ವಾಸುದೇವ ನಾವಡ ಮತ್ತು ಕಮಲಾಕ್ಷಿ ನಾವಡ ಅವರ ಪುತ್ರಿ ಕವನ ನಾವಡ ಅವರಿಗೆ ಏಳನೇ ರ್ಯಾಂಕ್, ಮಣೂರು ಗ್ರಾಮದ ಕೃಷ್ಣ ಎನ್. ಮತ್ತು ಸುಜಾತಾ ಕೆ. ಅವರ ಪುತ್ರಿ ಛಾಯಾ ಕೆ.ಅವರಿಗೆ ಹತ್ತನೇ ರ್ಯಾಂಕ್ ದೊರೆತಿದೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.










