ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಪ್ರತಿಯೊಬ್ಬ ನಾಗರಿಕನೂ ಅಪರಾಧಗಳನ್ನು ಎಸಗದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಲ್ಯೇ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ್ ಕನಕಶೆಟ್ಟಿ ಹೇಳಿಕೆ ಕೊಟ್ಟರು.

Call us

Click Here

ರೋಟರಿ ಕ್ಲಬ್ ಗಂಗೊಳ್ಳಿ, ನಮ್ಮ ಭೂಮಿ ಸಂಸ್ಥೆ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆ ಇವರ ಜಂಟಿ ಆಶ್ರಯ ಮೌಲ್ಯಾಧಾರಿತ ಶಿಕ್ಷಣ ಅಡಿಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ “ತೆರೆದ ಮನೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಠಾಣೆಯಲ್ಲಿ ಇರುವ ಆಯುಧಗಳು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ. ನಾಗೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿ ಸಂಸ್ಥೆಯ ಸದಸ್ಯರಾದ ಕೃಪಾ ಭಟ್, ಶ್ರೀನಿವಾಸ ಗಾಣಿಗ, ರೋಟರಿ ಕ್ಲಬ್‌ನ ಸದಸ್ಯರಾದ ವಾಸುದೇವ್ ಶೇರುಗಾರ್, ಜನಾರ್ದನ ಪೂಜಾರಿ, ದಿನಕರ್ ಶಾನಭಾಗ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply