ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 2024-25ನೇ ಶೈಕ್ಷಣಿಕ ಸಾಲಿನ ಎಲ್ ಕೆ ಜಿ ಯಿಂದ ಪಿ ಯು ಸಿ ವರೆಗಿನ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಗುಣಮಟ್ಟದ ಶಿಕ್ಷಣ ಹೊಂದಿರುವ ಸಂಸ್ಥೆಯತ್ತ ಪೋಷಕರು ಒಲವು ತೋರಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಿದ್ದಾಪುರ ಊರಿನ ಮಕ್ಕಳಿಗಾಗಿ ಬೇರೆ ವಾಹನ ವ್ಯವಸ್ಥೆ ಮಾಡಲಾಗಿದೆ. ಕಂಡ್ಲೂರು, ಗುಂಹೊಲ, ಬೇಳೂರು ಹಾಗೂ ಕೋಟೇಶ್ವರ ಈ ಮಾರ್ಗಗಳಿಗೆ ಹೊಸದಾಗಿ ವಾಹನ ಸೌಲಭ್ಯ ಒದಗಿಸಲು ಆಡಳಿತ ಮಂಡಳಿ 4 ಹೊಸ ಬಸ್ಸುಗಳನ್ನು ಖರೀದಿಸಿದೆ.
ಮಂಗಳೂರಿನ ಅಮರಜ್ಯೋತಿ ಆಟೋಮೊಬೈಲ್ಸ್ ಜನರಲ್ ಮ್ಯಾನೇಜರ್ ರಾನ್ಸನ್ ಮಚಾಡೊ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ನ ಆಡಳಿತ ಅಧಿಕಾರಿಗಳಾದ ರೆನಿಟಾ ಲೋಬೊ ಮತ್ತು ಶಮಿತಾ ರಾವ್ ಇವರಿಗೆ ಕೀ ಮತ್ತು ಹೂಗುಚ್ಚ ನೀಡಿ ವಾಹನ ಹಸ್ತಾಂತರಿಸಿದರು.











