ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇದರ 8ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ಕೊಂಕಣಿ ಖಾರ್ವಿ ಸಭಾಭವನ ತ್ರಾಸಿ ಇಲ್ಲಿ ಜರುಗಿತು.
ಸಭೆಯಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವರವರು ವರದಿ ಮಂಡಿಸಿ, ಸಂಘವು 76 ಕೋಟಿ ವಾರ್ಷಿಕ ವ್ಯವಹಾರ ನೆಡೆಸಿ 36.05 ಕೋಟಿ ಪಾಲುಬಂಡವಾಳ, ರೂ.18.56 ಕೋಟಿ ಠೇವಣಿ ಹೊಂದಿದ್ದು, 14.69 ಕೋಟಿ ಸಾಲ ನೀಡಿ ಬೇರೆ ಬೇರೆ ಸಂಸ್ಥೆಗಳಲ್ಲಿ 7.52 ಕೋಟಿ ವಿನಿಯೋಗ ಮಾಡಿದ್ದು, ಸಂಘದ ಕಾಯ್ದಿರಿಸಿದ ನಿಧಿ 3.10 ಕೋಟಿ ರೂ, ಒಟ್ಟು ದುಡಿಯುವ ಬಂಡವಾಳ 22.02 ಕೋಟಿಯಷ್ಟಿದ್ದನ್ನು ಹೊಂದಿದೆ. ಸಂಘವು ಆರಂಭದಿಂದಲೂ ಲಾಭದಿಂದ ಮುನ್ನೆಡೆಯುತ್ತಿದ್ದು, 2023-24 ರಲ್ಲಿ 12.6ಲಕ್ಷ ರೂ ಲಾಭ ಬಂದಿರುತ್ತದೆ ಎಂದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್ ಮದನ್ ಕುಮಾರ್, ಮೂರ್ತೆದಾರರ ಸೇವಾ ಸಹಕಾರ ಒಕ್ಕೂಟ ಉಡುಪಿಯ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಇತರ ಸಹಕಾರಿ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷರಾದ ಹಟ್ಟಿಯಂಗಡಿ ಉದಯಕುಮಾರ್, ಮಹಿಳಾ ಸಹಕಾರಿ ಸಂಘ(ನಿ) ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಶೇರುಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ತ್ರಾಸಿ ಹಾಗೂ ಶ್ರೀ ಸಾಯಿ ಗ್ರಾಮೀಣಾಭಿವೃದ್ದಿ ಟ್ರಸ್ಟ ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಾಯಿ ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಸ್‌ಎಸ್‌ಎಲ್‌ಸಿಯಲ್ಲಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳನ್ನು ಗೌರವ ಧನದೊಂದಿಗೆ ಅಭಿನಂದಿಸಲಾಯಿತು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ಯೋಜನೆಯಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂವಾಡಿ ತ್ರಾಸಿ ಗ್ರಾಮ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಳ್ಳಿಕಟ್ಟೆ ಹೊಸಾಡು ಗ್ರಾಮ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿಮಕ್ಕಿ ಬಿಜೂರು ಗ್ರಾಮ ಈ 3 ಶಾಲೆಯ 1 ಮತ್ತು 2ನೇ ತರಗತಿಯ 42 ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು ಮತ್ತು ಈ ಶ್ರೀ ಸಾಯಿ ಸ್ವ ಸಹಾಯ ಸಂಘದ ಸದಸ್ಯರ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ನೋಟ್ಸ್ ಪುಸ್ತಕ ವಿತರಿಸಲಾಯಿತು.
ಸಂಘದ ಸಿಬ್ಬಂದಿ ರೇಖಾ ವಂದಿಸಿದರು.