ಕುಂದಾಪುರ: ಬೃಹತ್ ಹಾಯಿ ದೋಣಿ ಧರ್ಮಸ್ಥಳ ಮ್ಯೂಸಿಯಂಗೆ ರವಾನೆ

Call us

Call us

Call us

ಕುಂದಾಪ್ರ ಡಾಟ್ ಕಾಂ‌ ಸುದ್ದಿ.
ಕುಂದಾಪುರ:
ಕಳೆದ 14 ವರ್ಷಗಳಿಂದ ಪಂಚಗಂಗಾವಳಿ ನದಿಯಲ್ಲಿ ಚಿಪ್ಪು ಸಂಗ್ರಹ ಮಾಡುತ್ತಿದ್ದ 51 ಅಡಿ ಉದ್ದ 10 ಅಡಿ ಅಗಲದ ಬೃಹತ್ ಹಾಯಿ ದೋಣಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯ ಮಂಜೂಷಾದಲ್ಲಿ ಇಡುವ ಸಲುವಾಗಿ ರವಿವಾರ ಕೊಂಡೊಯ್ಯಲಾಯಿತು.

Call us

Click Here

ಜೈ ಜೈ ಬಾಲಾಜಿ ಹೆಸರಿನ ವೆಂಕಟೇಶ ಖಾರ್ವಿ ಮಾಲಕತ್ವದ ಈ ದೋಣಿ ಒಂದೇ ಮರದ ಹಲಗೆಯಿಂದ ತಯಾರಾಗಿದ್ದು, ಒಮ್ಮೆಗೆ ಒಂದೂ ಮುಕ್ಕಾಲು ಲಾರಿ ಲೋಡು ಚಿಪ್ಪು ಸಂಗ್ರಹ ಮಾಡುವಷ್ಟು ದೊಡ್ಡದಿದೆ. ಹಿಂದೆಲ್ಲ ಪಂಚಗಂಗಾವಳಿಯಲ್ಲಿ ಚಿಪ್ಪು ಸಂಗ್ರಹ ಮಾಡಿಯೇ ಸಂಪಾದನೆ ಮಾಡಿ ವಿದ್ಯಾಭ್ಯಾಸ ಮಾಡಿದವರು, ಸಂಸಾರ ತೂಗಿದವರು ಇದ್ದರು. ಈಗ ಕಡಿಮೆಯಾಗಿದೆ. 20ರಷ್ಟಿದ್ದ ಇಂತಹ ದೊಡ್ಡ ಗಾತ್ರದ ದೋಣಿಗಳ ಸಂಖ್ಯೆ ಒಂದಕ್ಕಿಳಿದಿದೆ. ಇನ್ನೂ 100 ವರ್ಷ ಕಾಲ ಬಾಳಿಕೆ ಬರುವ ದೋಣಿಯನ್ನು ಮುಂದಿನ ಪೀಳಿಗೆಗೆ ಮೀನುಗಾರಿಕೆ, ಚಿಪ್ಪು ಸಂಗ್ರಹ, ಕೊಂಕಣಿ ಖಾರ್ವಿ,ಸಮಾಜದ ಇತಿಹಾಸ ತಿಳಿಸುವ ಸಲುವಾಗಿ ಧರ್ಮಸ್ಥಳಕ್ಕೆ ನೀಡಲಾಗುತ್ತಿದೆ‌ ಎನ್ನುತ್ತಾರೆ ಈ ದೋಣಿಯ ಮಾಲಿಕರು.

ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಾಹನ ಪೂಜೆ ನಡೆಸಿ ದೋಣಿಯನ್ನು 14 ಚಕ್ರದ ಲಾರಿಯಲ್ಲಿ ಕೊಂಡೊಯ್ಯಲಾಯಿತು. ಫೆರಿ ರಸ್ತೆಯಿಂದ ಹೊರಟ ಲಾರಿ ಶಾಸ್ತ್ರಿಸರ್ಕಲ್ ವರೆಗೆ ಮೆರವಣಿಗೆಯಲ್ಲಿ ಸಾಗಿತು. ಕೊಂಕಣಿ ಖಾರ್ವಿ, ಸಮಾಜದ ಅಧ್ಯಕ್ಷ ಜಯಾನಂದ ಖಾರ್ವಿ, ಚಿಪ್ಪುಸಂಗ್ರಹ ಕಾರರ ಸಂಘದವರು, ಸಮಾಜದವರು ಉಪಸ್ಥಿತರಿದ್ದರು.

Leave a Reply