ಮೇ.26ರಂದು ರಾಮಕ್ಷತ್ರಿಯ ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಹಾಮೃತ್ಯುಂಜಯ ಹೋಮ, ಇತರೆ ಕಾರ್ಯಕ್ರಮ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ವಿಶ್ವ ರಾಮಕ್ಷತ್ರಿಯ ಮಹಾಸಂಘದ ನೇತೃತ್ವದಲ್ಲಿ ರಾಮಕ್ಷತ್ರಿಯ ಸಮಾಜದ ಶ್ರೇಯೋಭಿವೃದ್ಧಿಗಾಗಿ ಮೇ.26ರಂದು ಬಾಳೆಕುದ್ರು ಶ್ರೀಮಠದಲ್ಲಿ ಮಹಾಮೃತ್ಯುಂಜಯ ಹೋಮ, ಚಂಡಿಕಾ ಹೋಮ, 108 ಕಾಯಿ ಗಣಹೋಮ ಹಮ್ಮಿಕೊಳ್ಳಲಾಗಿದೆ.

Call us

Click Here

ಅಂದು ಬೆಳಗ್ಗೆ ಗಂಟೆ 7-00ಕ್ಕೆ ಪ್ರಾರ್ಥನೆ, 11.30ಕ್ಕೆ ಪೂರ್ಣಾಹುತಿ, ಬಳಿಕ ಮುಕ್ಕಾ ಶ್ರೀನಿವಾಸ ಯುನಿವರ್ಸಿಟಿಯ ಸಂಶೋಧನಾ ಮಾರ್ಗದರ್ಶಕ ಡಾ. ಸೋಂದಾ ಭಾಸ್ಕರ ಭಟ್, ಕಟೀಲು ಅವರಿಂದ ಪ್ರವಚನ ಹಾಗೂ ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ.ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಇರಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್, ಆರ್. ಶಶಿಧರ ನಾಯ್ಕ್, ಕಾರ್ಯಧ್ಯಕ್ಷ ಕೆ. ನಾಗರಾಜ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

11 − 7 =