ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್: ಶೈಕ್ಷಣಿಕ ವರ್ಷದ ಪೂರ್ವಭಾವಿ ಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಮದರ್ ತೆರೇಸಾ ಶೈಕ್ಷಣಿಕ ಟ್ರಸ್ಟ್ ಶಂಕರನಾರಾಯಣ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ 2024-25ನೇ  ಸಾಲಿನ ಪೂರ್ವಪ್ರಾಥಮಿಕ ವಿಭಾಗದ ಪೂರ್ವಭಾವಿ ಸಭೆಯು ರೌಪಿಯ ಸಭಾಂಗಣದಲ್ಲಿ ನಡೆಯಿತು.

Call us

Click Here

ಸoಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾ ರಾವ್, ರೇನಿಟಾ ಲೋಬೊ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಕುಸುಮಾ ಶೆಟ್ಟಿ ಜಂಟಿಯಾಗಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಪಾಲಕರಿಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ದಾಖಲಾತಿ ವಯೋಮಿತಿ ಮತ್ತು ಇತರೇ ಇಲಾಖಾ ನಿಯಮಗಳ ಕುರಿತು ತಿಳಿಸಿದರು.

ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮಾ ಶೆಟ್ಟಿ ಎಲ್.ಕೆ.ಜಿ ಮತ್ತು ಯು. ಕೆ. ಜಿ ತರಗತಿಯ ಶೈಕ್ಷಣಿಕ ವರ್ಷದ ಕ್ರಿಯಾಯೋಜನೆ, ವಾಹನ ಸೌಲಭ್ಯ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರೇ ವಿಷಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಅಧ್ಯಕ್ಷಿಯ ಭಾಷಣದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶಮಿತಾ ರಾವ್ ಮಾತಾನಾಡಿ, ನಾವು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರಿಂದ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿಯಲ್ಲಿ  ಏರಿಕೆಯಾಗಿದ್ದು ಇನ್ನು ನಮ್ಮ ಜವಾಬ್ಧಾರಿ ಹೆಚ್ಚಾಗಿರುವುದರಿಂದ ಪಾಲಕರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ನಮ್ಮ ಮೇಲಿರುವ ಭರವಸೆಯನ್ನು ನಾವು ಪೂರೈಸುವತ್ತ ಪ್ರಯತ್ನಿಸುತ್ತೇವೆ ಎಂದು ಎಲ್ಲರಿಗೂ ಶುಭ ಹಾರೈಸಿದರು.

Click here

Click here

Click here

Click Here

Call us

Call us

ಸಹ ಶಿಕ್ಷಕಿ ಚೈತ್ರ ಸ್ವಾಗತಿಸಿದರು, ಸಹಶಿಕ್ಷಕಿ ಶಿಲ್ಪಾ ಶೆಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply