ಕುಂದಾಪುರ: ಕ್ರೀಡೆಗಳು ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವ ಜೊತೆಗೆ ನಮ್ಮ ಕೌಶಲ್ಯವನ್ನು ವೃದ್ಧಿಸುತ್ತದೆ. ನಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕ್ರೀಡಾಕೂಟದಿಂದ ದೊರೆಯುವುದರಿಂದ ರೋಟರಿ ವಲಯದ ಸದಸ್ಯರ ನಡುವಿನ ಭಾಂದವ್ಯ ವೃದ್ಧಿಸುವ ಸಲುವಾಗಿ ವಲಯ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಎಲ್ಲ ಸದಸ್ಯರ ಉತ್ಸಾಹದ ಭಾಗವಹಿಸುವಿಕೆಯಿಂದ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ 1ರ ಸದಸ್ಯರಿಗೆ ಏರ್ಪಡಿಸಿದ ರೋಟರಿ ವಲಯ ಕ್ರೀಡಾಕೂಟದ ಅಂಗವಾಗಿ ಕುಂದಾಪುರದ ಆರ್ಶೀವಾದ ಹಾಲ್‌ನಲ್ಲಿ ಆಯೋಜಿಸಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಸಹನಾ ಡೆವಲಪರ‍್ಸ್‌ನ ನಿರ್ದೇಶಕ ಸುರೇಂದ್ರ ಶೆಟ್ಟಿ ಬಹುಮಾನ ವಿತರಿಸಿದರು. ವಲಯದ ಕಾರ್ಯದರ್ಶಿ ಸುದರ್ಶನ್ ಕೆ. ಎಸ್., ಕ್ರೀಡಾಕೂಟ ಸಂಯೋಜಕ ರವಿರಾಜ್ ಶೆಟ್ಟಿ, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ರೋಟರಿ ಸದಸ್ಯರಾದ ರಾಘವೇಂದ್ರಚರಣ ನಾವಡ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು.
ಕ್ರೀಡಾಕೂಟಕ್ಕೆ ಚಾಲನೆ : ರೋಟರಿ ಕ್ಲಬ್ ಕುಂದಾಪುರದ ಆತಿಥ್ಯದಲ್ಲಿ ಬೆಳಿಗ್ಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ರೋಟರಿ ವಲಯದ ಕ್ರೀಡಾಕೂಟಕ್ಕೆ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಚಾಲನೆ ನೀಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ವಲಯದ ಕಾರ್ಯದರ್ಶಿ ಸುದರ್ಶನ್ ಕೆ. ಎಸ್., ಕ್ರೀಡಾಕೂಟ ಸಂಯೋಜಕ ರವಿರಾಜ್ ಶೆಟ್ಟಿ, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಜೋನಲ್ ಲೆಫ್ಟಿನೆಂಟ್‌ಗಳಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಗಜೇಂದ್ರ ಶೆಟ್ಟಿ, ಶ್ಯಾಮರಾಜ್ ಭಟ್, ಮಂಜುನಾಥ ಮಹಾಲೆ, ರೋಟರಿ ಅಸಿಸ್ಟೆಂಟ್ ಗವರ್ನರ್‌ಗಳಾದ ಮೊಳಹಳ್ಳಿ ಗಣೇಶ ಶೆಟ್ಟಿ, ಅಭಿನಂದನ ಶೆಟ್ಟಿ, ಎಂ. ಎನ್. ಅಡಿಗ, ರೋಟರಿ ಸದಸ್ಯರಾದ ಶ್ರೀಪಾದ ಉಪಾಧ್ಯಾಯ, ಸತೀಶ್ ಕೋಟ್ಯಾನ್, ಪ್ರದೀಪ ವಾಜ್, ಕೆ. ಆರ್. ನಾಯ್ಕ್, ಮುತ್ತಯ್ಯ ಶೆಟ್ಟಿ ವಲಯದ13 ರೋಟರಿ ಕ್ಲಬ್‌ನ ಅಧ್ಯಕ್ಷರುಗಳು, ತೀರ್ಪುಗಾರರಾದ ನಾರಾಯಣ ಶೆಟ್ಟಿ ಮಾರ್ಕೋಡು, ಸುರೇಶ್ ಎಂ, ಬಿ. ಬಿ. ಗಾಂವ್ಕರ್, ಎಂ. ಬಿ. ಲಮಾಣಿ, ಕೇಶುಬಾಯ್ ರಾಥೋಡ್ ರೋಟರಿ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು. ರೋಟರಿ ಸದಸ್ಯರಾದ ರಾಘವೇಂದ್ರಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು.