ಕಬಾಬ್, ಫಿಶ್ ಫ್ರೈಗೆ ಕೃತಕ ಬಣ್ಣ ಬಳಕೆಗೆ ನಿರ್ಬಂರ್ಧ. ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ, ದಂಡ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ರಾಜ್ಯಾದ್ಯಂತ ಕಬಾಬ್, ಮೀನು ಫ್ರೈಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.

Call us

Click Here

ಕರ್ನಾಟಕದ 36 ಕಡೆ ಕಬಾಬ್ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿತ್ತು. ಅದರಲ್ಲಿ ಯಲ್ಲೋ ಹಾಗೂ ಕಾರ್ಮೋಸಿನ್ ರಾಸಾಯನಿಕ ಮಾದರಿ ಕಂಡುಬಂದಿದೆ. ಈ ಎರಡು ಅಂಶಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಎಂದು ವರದಿ ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಈ ತೀರ್ಮಾನ ಕೈಗೊಂಡಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು.

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನ FSSAI ಸಂಗ್ರಹಿಸಿದ್ದು, ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಾದರಿ ಟೆಸ್ಟ್ ಮಾಡಲಾಗಿದೆ. ಟೆಸ್ಟಿಂಗ್ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಇರೋದು ಪತ್ತೆಯಾಗಿತ್ತು.

ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್-ಬಿ ರಾಸಾಯನಿಕ ಅಂಶ ಪತ್ತೆಯಾಗಿದ್ರೆ, ಇತ್ತ ಗೋಬಿ ಮಂಚೂರಿಯಲ್ಲಿ ಸನ್ಸೆಟ್ ಯೆಲ್ಲೊ ಬಣ್ಣ ಮತ್ತು ಟಾಟ್ರ್ರಾಜಿನ್ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್ಸೆಟ್ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಲರ್ ಬಳಕೆಯನ್ನು ನಿಷೇಧಿಸಿದೆ.

Click here

Click here

Click here

Click Here

Call us

Call us

ಏನಿದು ರೋಡ್ಮೈನ್ ಬಿ. ಪರಿಣಾಮವೇನು?
ರೋಡ್ಮೈನ್ ಬಿ ರಾಸಾಯನಿಕವನ್ನು, ಜವಳಿ, ಕಾಗದ, ಚರ್ಮದ ಉದ್ಯಮಗಳಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತೆ. ಈ ರಾಸಾಯನಿಕ ಆಹಾರದ ಮೂಲಕ ದೇಹ ಸೇರಿದ್ರೆ, ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವ ಸಂಭವವಿದೆ. ಇದು ಕಾಟನ್ ಕ್ಯಾಂಡಿಯಲ್ಲಿ ಮಾತ್ರವಲ್ಲ, ಸಿಹಿ ತಿಂಡಿಗಳಾದ ಬಣ್ಣದ ಮಿಠಾಯಿಗಳಲ್ಲೂ ಇದು ಕಂಡು ಬರುತ್ತೆ. ಇದು ನಿರಂತರವಾಗಿ ದೇಹ ಸೇರಿದ್ರೆ ಮೆದುಳಿಗೂ ತುಂಬಾ ಎಫೆಕ್ಟ್ ಆಗುವ ಸಾಧ್ಯತೆಯಿದೆ.

Leave a Reply