ಕುಂದಾಪುರ: ಸುಡುಗಾಡು ತೋಡಿನ ಅವ್ಯವಸ್ಥೆ ಸರಿಪಡಿಸಲು ಆಗ್ರಹ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ  ಪುರಸಭೆ ವ್ಯಾಪ್ತಿಯ ಸುಡುಗಾಡು ತೋಡು ಅವ್ಯವಸ್ಥೆಯ ಆಗರಾವಾಗಿದ್ದು ಅದನ್ನು ಶೀಘ್ರ ಸರಿಪಡಿಸುವಂತೆ ಕುಂದಾಪುರ ಸಹಾಯಕ ಆಯುಕ್ತರ ಬಳಿ ಸಾರ್ವಜನಿಕರು ಮನವಿ ನೀಡಿದ್ದಾರೆ.

Call us

Click Here

ಈ ಹಿಂದೆ ಅನೇಕ ಬಾರಿ  ಸಾರ್ವಜನಿಕರು ಪುರಸಭೆಯ ಗಮನಕ್ಕೆ ತಂದರೂ ಪ್ರಯೋಜನವಿಲ್ಲದ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ವಾಸಿಸುವ ಜನರ ಪರಿಸ್ಥಿತಿ ಕಷ್ಟಕರವಾಗಿದೆ̤ ತೋಡಿನಲ್ಲಿ ದುರ್ನಾಥ ಬೀರುವ ತ್ಯಾಜ್ಯಗಳೂ, ಸಾಂಕ್ರಮಿಕ ರೋಗಗಳು ಕೊಳೆತು ನಾರುವ ತ್ಯಾಜ್ಯದ ರಾಶಿಯಿಂದ ಈ ಪರಿಸರದಲ್ಲಿ ಚಿಕನ್‌ಗುನ್ಯ, ಮಲೇರಿಯಾ, ಡೆಂಗ್ಯೂ ತರಹದ ಸಾಂಕ್ರಮಿಕ ರೋಗಗಳು  ಹರುಡುತ್ತದೆ ಎಂದು ಸಾರ್ವಜನಿಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ತೋಡಿನ ಅಸುಪಾಸಿನಲ್ಲಿ ಅಸಂಖ್ಯಾತ ಜನರು ವಾಸವಾಗಿದ್ದು ಅದರಲ್ಲಿ ಮಕ್ಕಳು , ವೃದ್ಧರು, ಅನಾರೋಗ್ಯ ಪೀಡಿತರ ಸಂಖ್ಯೆಯೇ ಅಧಿಕವಾಗಿದೆ ಹಾಗೂ ನೂರಕ್ಕೂ ಅಧಿಕ ಮನೆಗಳಿದ್ದು ನಡೆದಾಡಲು ಕೂಡ ಸರಿಯಾದ ದಾರಿಯ ವ್ಯವಸ್ಥೆಯೂ ಸಹಾ ಇಲ್ಲದೇ ಜನರು ಬಹಳ ಸಂಕಷ್ಠಕ್ಕೆ ತುತ್ತಾಗಿದ್ದಾರೆ. ಈ ಚರಂಡಿಯನ್ನು ಒಳಚರಂಡಿ ವ್ಯವಸ್ಥೆಯಾಗಿ ಮಾಡಿಕೊಡಬೇಕೆಂದು ಮನವಿ ಆಗ್ರಹಸಿದ್ದಾರೆ.

Leave a Reply