ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ರಿಕ್ಷಾ ಹಾಗೂ ಟ್ಯಾಕ್ಸಿ ನಿಲ್ದಾಣಕ್ಕೆ ಸ್ಥಳ ನಿಗದಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಪುರಸಭಾ ವ್ಯಾಪ್ತಿಯ ಸರ್ಕಾರಿ ಜಾಗಗಳಾದ ಸ.ನಂ.112 ರ 0.01 ಎಕ್ರೆ ಜಾಗದ ವಡೇರಹೋಬಳಿ ಶಿವಪ್ರಸಾದ್ ರಿಕ್ಷಾ ನಿಲ್ದಾಣದಲ್ಲಿ 8 ರಿಂದ 9 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ. 141/1ಎ ರ 0.01.50 ಎಕ್ರೆ ಪ್ರದೇಶದ ವಿನಯಾ ನರ್ಸಿಂಗ್ ಹೋಂ ರಿಕ್ಷಾ ನಿಲ್ದಾಣದಲ್ಲಿ 8 ರಿಂದ 10 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ.141 ರ 0.02 ಎಕ್ರೆ ಪ್ರದೇಶದ ಹೊಸ ಬಸ್ ನಿಲ್ದಾಣ ರಿಕ್ಷಾ ನಿಲ್ದಾಣದಲ್ಲಿ 12 ರಿಂದ 13 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ.182/1ಎ3ಎ1ಡಿ ಸ.ನಂ.112ರ 0.05 ಎಕ್ರೆ, 0.02 ಎಕ್ರೆ ಪ್ರದೇಶದ ವಡೇರಹೋಬಳಿಯ ಶಾಸ್ರೀ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ 25 ರಿಂದ 28 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ. 145 ರ 0.03.50 ಎಕ್ರೆ ಪ್ರದೇಶದ ಚಿನ್ಮಯಿ ಆಟೋ ರಿಕ್ಷಾ ನಿಲ್ದಾಣದಲ್ಲಿ 6 ರಿಂದ 7 ಆಟೋ ರಿಕ್ಷಾಗಳನ್ನು ನಿಲ್ಲಿಸಲು ಹಾಗೂ ಸ.ನಂ.141/1ಎ ರ 0.02 ಎಕ್ರೆ ಪ್ರದೇಶದ ಪಾರಿಜಾತ ಟ್ಯಾಕ್ಸಿ ನಿಲ್ದಾಣದಲ್ಲಿ 6 ಟ್ಯಾಕ್ಸಿಗಳನ್ನು ನಿಲ್ಲಿಸಲು ಸ್ಥಳಗಳನ್ನು ನಿಗಧಿಪಡಿಸಿ ಎಂದು ತಿಳಿಸಿದರು.

Call us

Click Here

ಮೋಟಾರು ವಾಹನ ಕಾಯ್ದೆ 1988 ರ ಕಲಂ 117 ರಂತೆ ಮತ್ತು ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 ಎ(6) ರಂತೆ ಈ ಬಗ್ಗೆ ಅವಶ್ಯವಿರುವ ಸಂಜ್ಞೆಯ ಸೂಚನಾ ಫಲಕಗಳನ್ನು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆಳವಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

Leave a Reply