ಗುರುಕುಲ ಪಬ್ಲಿಕ್ ಶಾಲೆಯ ಪೂ. ಪ್ರಾ ಪುಟಾಣಿಗಳ ಬಣ್ಣಗಳ ದಿನಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳು ತಮ್ಮ ಪುಷ್ಪವಾಟಿಕಾದಲ್ಲಿ ಬಣ್ಣಗಳ ದಿನವನ್ನು ಅತ್ಯಂತ ಆಕರ್ಷಕವಾಗಿ ಆಚರಿಸಿದರು.

Call us

Click Here

ಬಣ್ಣಗಳ ದಿನಾಚರಣೆಯ ಅಂಗವಾಗಿ ಪುಟಾಣಿಗಳು ಬಣ್ಣಬಣ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು. ಜೊತೆಗೆ ಬಣ್ಣಗಳ ಮಹತ್ವವನ್ನು ಶಿಕ್ಷಕಿಯರು ವಿವಿಧ ಹಾಡು ಹಾಗೂ ನೃತ್ಯದ ಮೂಲಕ ಮಕ್ಕಳಿಗೆ ಮನವರಿಕೆ  ಮಾಡಿಸಿದರು. ಬಣ್ಣದ ಪೇಪರ್ ನಲ್ಲಿ ಪುಟಾಣಿಗಳಿಗೆ ಆಕರ್ಷಕ ಆಟಿಕೆಗಳನ್ನು ಮಾಡಿ ಕೊಡಲಾಯಿತು. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಮೂಲಕ ಬಣ್ಣಗಳ ಮಹತ್ವವನ್ನು ಅರ್ಥಪೂರ್ಣವಾಗಿ ಅರಿತರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ.ಎಸ್. ಶೆಟ್ಟಿ ಪ್ರಾಂಶುಪಾಲರಾದ ಸುನಿಲ್, ಪ್ಯಾಟ್ರಿಕ್  ಸಂಯೋಜಕಿ ವಿಶಾಲ ಶೆಟ್ಟಿ ಮತ್ತು ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.

Leave a Reply