ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ 13ನೇ ವಾರ್ಷಿಕ ಮಹಾಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜನಸಾಮಾನ್ಯರ ಪ್ರತಿ ವಿಚಾರ ಹಾಗೂ ವಿಶೇಷ ಸಂದರ್ಭಗಳಿಗೆ ಧ್ವನಿ ಕೊಡುವ, ಉತ್ತಮವಾದ ಕಲೆಗಳಿಗೆ ಬೆಳಕನ್ನು ನೀಡುವ ಮೂಲಕ ಉದ್ಯಮದಲ್ಲಿ ಕೇವಲ ವೃತ್ತಿಪರರಾಗದೆ ಧ್ವನಿ ಬೆಳಕಿನ ಕಲಾವಿದರಾಗಿದ್ದೀರಿ. ನಿಮ್ಮಲ್ಲಿನ ವಿಶಿಷ್ಟ ಕಲೆಯ ಮೂಲಕ ಬೇರೆಯವರ ಮನಮುಟ್ಟುವಂತೆ, ಕಣ್ಮನ ತಣಿಸುವಂತೆ ಮಾಡುವ ನಿಮ್ಮ ಕಾಯಕ ಅಭಿನಂದನಾರ್ಹವಾದದ್ದು ಎಂದು ಕಿರಿಮಂಜೇಶ್ವರ ಅಗಸ್ಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ವಿ. ಪ್ರಕಾಶ್ ಐತಾಳ್ ಹೇಳಿದರು.

Call us

Click Here

ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ 13ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಬೈಂದೂರು ವಲಯದ ಅಧ್ಯಕ್ಷ ಗಣೇಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಬೈಂದೂರು ಆರಕ್ಷಕ ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್. ಕಾನೂನು ಮಾಹಿತಿ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ನಯನಾ ಇವರನ್ನು ಸನ್ಮಾನಿಸಲಾಯಿತು. ಎಸ್‌ ಎಸ್‌ ಎಲ್‌ ಸಿ ಅಲ್ಲಿ ಗರಿಷ್ಠ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘಟನೆಯ ಹಿರಿಯ ಮೂವರು ಸದಸ್ಯರನ್ನು ಗೌರವಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಕುಮಾರ್, ಪ್ರಧಾನ ಕಾರ್ಯದರ್ಶಿ ಭರತ್‌ಕುಮಾರ್, ಕೋಶಾಧ್ಯಕ್ಷ ಗಣೇಶ್ ಎಂ. ಕೆ., ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಜ್ ಮಲ್ಲಾರ್, ರಾಜ್ಯ ಪ್ರತಿನಿಧಿ ದಾಮೋದರ್ ಶೆಟ್ಟಿಗಾರ್, ಹಸೈನಾ, ರಾಘವೇಂದ್ರ ಪ್ರಭು, ಕುಂದಾಪುರ, ಬ್ರಹ್ಮಾವರ, ಉಡುಪಿ, ಮಲ್ಪೆ, ಕಾಪು, ಕಾರ್ಕಳ ವಲಯದ ಅಧ್ಯಕ್ಷರು ಇದ್ದರು.

Click here

Click here

Click here

Click Here

Call us

Call us

ಜಿಲ್ಲಾ ಪ್ರತಿನಿಧಿ ಎಚ್. ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ವಲಯದ ಗೌರವಾಧ್ಯಕ್ಷ ಶಶಿಧರ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕಾರ್ಯದರ್ಶಿ ಪ್ರಭಾಕರ ದೇವಾಡಿಗ ವರದಿ, ನಿಕಟಪೂರ್ವ ಕಾರ್ಯದರ್ಶಿ ಯು. ವಿನಾಯಕ ಪ್ರಭು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶೇಷು ದೇವಾಡಿಗ ವಂದಿಸಿದರು.

Leave a Reply