ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪತ್ನಿಯೊಂದಿಗೆ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ಪತಿಯು, ಕಂಡ್ಲೂರು ಸೇತುವೆ ಬಳಿ ಏಕಾಏಕಿ ಹೊಳೆಗೆ ಹಾರಿದ ಘಟನೆ ಮಂಗಳವಾರ ನಡೆದಿದೆ. ಕಾಳಾವರ ಗ್ರಾಮದ ನಿವಾಸಿ ಹರೀಶ್ ಬೋವಿ (40) ನಾಪತ್ತೆಯಾದ ವ್ಯಕ್ತಿ.
ಛಾಯಾಗ್ರಾಹಕ ವೃತ್ತಿ ಮಾಡಿಕೊಂಡಿದ್ದ ಹರೀಶ್ ಅವರು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಇತ್ತೀಚಿಗೆ ಗಂಭೀರವಾಗಿರುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ ಪತ್ನಿಯೊಂದಿಗೆ ಜಗಳವಾಡಿದ್ದು, ಈ ವೇಳೆ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡಿದ್ದ ಅವರ ಪತ್ನಿ ಕಂಡ್ಲೂರು ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಗಂಡ ಹೆಂಡತಿಯನ್ನು ಠಾಣೆಗೆ ಕರೆಯಿಸಿ ಸಮಾಲೋಚನೆ ನಡೆಸಿ ಬಳಿಕ ಆಟೋದಲ್ಲಿ ಮನೆಗೆ ಕಳಿಸಿದ್ದರು. ಠಾಣೆಯಿಂದ ಹಿಂದಿರುವ ವೇಳೆ ಕಂಡ್ಲೂರು ಸೇತುವೆ ಸಮೀಪ ಆಟೋ ಚಾಲಕನಿಗೆ ರಿಕ್ಷಾ ನಿಧಾನಿಸುವಂತೆ ತಿಳಿಸಿದ ಹರೀಶ್, ತಕ್ಷಣ ವಾರಾಹಿ ಹೊಳೆಗೆ ಸೇತುವೆಯಿಂದ ಹಾರಿದ್ದಾರೆ.
►► ಪುನರ್ವಸು ಮಳೆಯಬ್ಬರ: ಕೋಟ, ಬೈಂದೂರು ಭಾಗದಲ್ಲಿ ನೆರೆ. ಕುಂದಾಪುರದ ವಿವಿಧೆಡೆ ಅಪಾರ ಹಾನಿ – https://kundapraa.com/?p=74390 .
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಹಾಊ ಮುಳುಗುತಜ್ಞರು ಹರೀಶ್ ಪತ್ತೆಗೆ ಶೋಧಕಾರ್ಯದಲ್ಲಿ ತೊಡಗಿದರು. ಆದರೆ ತುಂಬಿ ಹರಿಯುತ್ತಿರುವ ನದಿ ನೀರಿನಲ್ಲಿ ಪತ್ತೆ ಕಾರ್ಯ ಸಫಲವಾಗಿಲ್ಲ. ಕಂಡ್ಲೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
Note: ಬದುಕಿನ ಯಾವುದೇ ಘಟನೆಗಳಿಗೂ ಆತ್ಮಹತ್ಯೆ ಪರಿಹಾರವಲ್ಲ. ಹತಾಶೆ ಕಾಡುತ್ತಿದ್ದರೆ ಸಮೀಪದ ಮನೋವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದು ಉತ್ತಮ