ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇತ್ತೀಚಿಗೆ ವಯೋನಿವೃತ್ತಿ ಹೊಂದಿದ ಸಹಕಾರ ಇಲಾಖೆ ಕುಂದಾಪುರ ಉಪವಿಭಾಗದಲ್ಲಿ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸಿದ ಅರುಣ್ ಕುಮಾರ್ ಎಸ್. ವಿ. ಅವರನ್ನು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಆನಂದ ಬಿಲ್ಲವ ಅವರ ಸನ್ಮಾನಿತರ ಸೇವಾವಧಿ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸನ್ಮಾನಿತರು ತಮ್ಮ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡರು.
ನಿರ್ದೇಶಕರಾದ ಶ್ರೀನಿವಾಸ ಜತ್ತನ್ ಪೂಜಾರಿ, ಹರೀಶ ಮೇಸ್ತ, ಕೆ. ಮಾಧವ ಖಾರ್ವಿ, ಸುಭಾಶ್ಚಂದ್ರ ಪೂಜಾರಿ, ಜಿ. ಗೋಪಾಲ ನಾಯ್ಕ್, ಪ್ರೇಮಾ ಸಿ. ಪೂಜಾರಿ, ಯಮುನಾ, ಚಂದ್ರಮತಿ ಡಿ. ಹೆಗ್ಡೆ, ನಾಗರಾಜ ಎಂ., ಲಕ್ಷ್ಮಣ, ಬ್ಯಾಂಕಿನ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ವಾಸುದೇವ ಶೇರುಗಾರ್ ವಂದಿಸಿದರು.