ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಭವಿಷ್ಯವನ್ನು ಕಟ್ಟುವವರು ಇಂದಿನ ಯುವ ವಿದ್ಯಾರ್ಥಿಗಳು ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ “ಕೌಶಲ್ಯ ತರಬೇತಿಯ ಅವಕಾಶ ಮತ್ತು ಸೌಲಭ್ಯಗಳು” ಕುರಿತ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯುವಶಕ್ತಿ ಬೆಳಗುತ್ತಾ ಇದೆ. ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಜೊತೆಯಲ್ಲಿ ಯುವಶಕ್ತಿ ತಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾದರೆ ಅದಕ್ಕೆ ಪೂರಕ ಅವಕಾಶಗಳು ಮತ್ತು ಸೌಲಭ್ಯಗಳು ಬಗ್ಗೆ ಮಾಹಿತಿಯನ್ನು ಚೆನ್ನಾಗಿ ತಿಳಿದಿರಬೇಕು . ತಿಳಿದುಕೊಂಡು ಒಳ್ಳೆಯ ರೀತಿಯಲ್ಲಿ ಮುಂದುವರಿದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬೇಕಾದರೆ ನಿಮ್ಮ ಬದುಕಿನ ಶಿಲ್ಪಿಗಳು ನೀವಾಗಿರಬೇಕು. ನಿಮ್ಮ ಸಾಧನೆಯನ್ನು ಜಗತ್ತು ಮೆಚ್ಚುವಂತಿರಲಿ ಎಂದು ಆಶಿಸಿದರು.
ಮಹಿಳಾ ವೇದಿಕೆಯ ಕುರಿತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಮೀನಾಕ್ಷಿ ಎನ್. ಎಸ್. ಮಾತನಾಡಿದರು. ಡಿಜಿಟಲೈಜೇಶನ್ ಮತ್ತು ಐಟಿಸಿ ಕುರಿತು ಕಂಪ್ಯೂಟರ್ ವಿಭಾಗದ ಉಪನ್ಯಾಸಕ ಮುಕುಂದ ಮಾತನಾಡಿದರು. ವಿವಿಧ ಸರ್ಟಿಫಿಕೇಟ್ ಕೋರ್ಸ್ ಕುರಿತು ಕಂಪ್ಯೂಟರ್ ವಿಭಾಗದ ರಾಮಚಂದ್ರ ಆಚಾರ್ಯ ಮಾತನಾಡಿದರು.
ಪಾಠೇತರ ಚಟುವಟಿಕೆಗಳ ಕುರಿತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅರುಣ್ ಎಂ. ಎಸ್. ಮಾತನಾಡಿದರು. ವೃತ್ತಿ ಮಾರ್ಗದರ್ಶನದ ಕುರಿತು ಕಂಪ್ಯೂಟರ್ ವಿಭಾಗದ ರಾಜೇಂದ್ರ ಹೋಬಳಿದಾರ್ ಮಾತನಾಡಿದರು. ಕ್ರೀಡೆಯಲ್ಲಿನ ಅವಕಾಶ ಮತ್ತು ಸೌಲಭ್ಯಗಳ ಕುರಿತು ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕಿ ವನಿತಾ ಮಾತನಾಡಿದರು. ಗ್ರಂಥಾಲಯದ ಕುರಿತು ಮನೋಹರ ಉಪಾಧ್ಯಾಯ ಮಾತನಾಡಿದರು.
ಇತಿಹಾಸ ವಿಭಾಗದ ಉಪನ್ಯಾಸಕಿ ಸ್ನೇಹಾ ಎಸ್. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.















