ಕುಂದಗನ್ನಡದ ಬಗ್ಗೆ ಕೀಳರಿಮೆ ಬೇಡ: ರೇವತಿ ಶೆಟ್ಟಿ

Call us

Call us

Call us

ಕುಂದಾಪುರ:  ಉದ್ಯೋಗ ಅರಸಿ ಪಟ್ಟಣದ ಕಡೆಗೆ ಮುಖಮಾಡುವ ಯುವಕರು, ಪಟ್ಟಣದ ಸಂಸ್ಕೃತಿ ಹಳ್ಳಿಗೆ ಹೊತ್ತು ಹಿಂದಿರುಗುತ್ತಿದ್ದಾರೆ. ಆದರೆ ಆಧುನಿಕ ತಳಕು ಬಳಕಿನೊಂದಿಗೆ ನಮ್ಮೂರಿನ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಉದ್ಘೋಷಕಿ ರೇವತಿ ಶೆಟ್ಟಿ ಕೋಟ ಹೇಳಿದರು.

Call us

Click Here

ಅವರು ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ವೇದಿಕೆಯ ಕುಂದಾಪುರದ ‘ಡಿಂಡಿಮ’ ಎರಡನೇ ಭಾನುವಾರದ ಕಾರ್ಯಕ್ರಮದ ಮಾತಿನರಮನೆಯಲ್ಲಿ ‘ನಮ್ಮೂರ ಕಿಂಡಿಯಲ್ಲಿ ಕಂಡ ಕನ್ನಡ ಜಗತ್ತು’ ಎಂಬ ವಿಷಯದ ಕುರಿತು ಮಾತನಾಡಿದರು. ಕುಂದಗನ್ನಡದಲ್ಲಿ ಎಲ್ಲಿಯೂ ಕಾಣದ ಕಂಪಿದೆ, ವೈವಿಧ್ಯತೆ ಇದೆ. ಕುಂದಗನ್ನಡಿಗರ ಸಾಧನೆಯೂ ಅನನ್ಯವಾದುದ್ದಾರೂ ಗುರುತಿಸಿದ್ದು ವಿರಳ. ಕುಂದಗನ್ನಡದ ಬಗೆಗೆ ಕೀಳರಿಮೆಯ ಹೊಂದುವ ಅಗತ್ಯವಿಲ್ಲ. ವ್ಯಾವಹಾರಿಕವಾಗಿ ಯಾವ ಭಾಷೆಯನ್ನು ಬಳಸಿದರೂ ಕೊನೆಪಕ್ಷ ಮನೆಯಲ್ಲಾದರೂ ಕುಂದಗನ್ನಡವನ್ನು ಬಳಸೋಣ ಆ ಮೂಲಕ ಬೆಳೆಸೋಣ ಎಂದವರು ಕರೆ ನೀಡಿದರು.

ಕುಂದಾಪುರದ ಪೌರಕಾರ್ಮಿಕೆ ಇಂದಿರಾ ಅವರಿಗೆ ನುಡಿ ಗೌರವ ಸಮರ್ಪಿಸಲಾಯಿತು. ಮಾತಿನರಮನೆಯಲ್ಲಿ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ, ಹಳ್ಳಿ ಶ್ರೀನಿವಾಸ ಭಟ್, ಉಮೇಶ್ ಪುತ್ರನ್ ಉಪಸ್ಥಿತರಿದ್ದರು.

ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪವಿತ್ರಾ ಬಿದ್ಕಲ್‌ಕಟ್ಟೆ ನಿರ್ವಹಿಸಿದರು. ಕೋಣಿ ಕೆ.ಜಿ.ಜೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕಾವ್ಯರಂಗ,ಕನ್ನಡ ಕಾವ್ಯಗಳ ರಂಗಾಭಿವ್ಯಕ್ತಿ ಹಾಗೂ ಉಡುಪಿ ಕಲಾಸಿಂಧು ಸುಗಮ ಸಂಗೀತ ಬಳಗದ ಕಲಾವತಿ ದಯಾನಂದ ಅವರಿಂದ ಭಾವಯಾನ ಹಾಗೂ ಸುಮತಿ ಬೆಂಗಳೂರು ಅವರ ರಾಗದ ಜೊತೆಗೊಂದು ಪಯಣ ಕಾರ್ಯಕ್ರಮ ನಡೆಯಿತು.

_MG_0197 _MG_0169 _MG_0166 _MG_0163 _MG_0159 _MG_0156

Click here

Click here

Click here

Click Here

Call us

Call us

Leave a Reply