ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಶ್ರೀಶ ಗುಡ್ರಿ ಅವರಿಗೆ ಚಿನ್ನದ ಪದಕ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇವರ ವತಿಯಿಂದ ಥಂಡರ್ಸ್ ಗ್ರ್ಯಾಂಡ್ ಬೇ, ಸುಭಾಸ್‌ನಗರ, ಕುರ್ಕಾಲು ಇಲ್ಲಿ ನಡೆದ ದ್ವಿತೀಯ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಕಟಾ ಮತ್ತು ಕುಮಿಟಿ ಈ ಎರಡೂ ವಿಭಾಗದಲ್ಲಿ ಶ್ರೀಶ ಗುಡ್ರಿ ಅವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

Call us

Click Here

ಅವರು ಈ ಮೊದಲು ದೆಹಲಿಯಲ್ಲಿ ನಡೆದಂತಹ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿರುತ್ತಾರೆ.

ಶ್ರೀಶ ಗುಡ್ರಿ ಅವರು ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಿಯಲ್ ಆರ್ಟ್ಸ್ ಅಂಡ್ ಫಿಟ್ನೆಸ್ ಇದರ ಮುಖ್ಯಸ್ಥ ಅಕ್ಷಯ್ ಹೆಮ್ಮಾಡಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರ.

Leave a Reply