ಕೋಡಿಯಲ್ಲಿ ಕೊಂಕಣಿ ಖಾರ್ವಿ ಸಮಾಜದಿಂದ ಸಮುದ್ರ ಪೂಜೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಕೋಡಿ ಸಮುದ್ರ ಕಿನಾರೆಯಲ್ಲಿ ಸೋಮವಾರದಂದು ಸಮುದ್ರ ಪೂಜೆ ಜರುಗಿತು.

Call us

Click Here

ಉತ್ತಮ ಮಳೆ, ಬೆಳೆ, ಮತ್ಸ್ಯ ಸಮೃದ್ಧಿ ಹಾಗೂ ಲೋಕ  ಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಯಿತು. ಖಾರ್ವಿಕೇರಿ  ಶ್ರೀಮಹಾಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಅಜಂತ ಖಾರ್ವಿ ಪೂಜೆಯ ನೇತೃತ್ವ ವಹಿಸಿದ್ದರು.

ದೇವಳದ ಪ್ರಧಾನ ಅರ್ಚಕರಾದ ಸುಮಂತ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಳದ ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಮುಕ್ತೇಸರರದ ಆನಂದ ನಾಯ್ಕ,  ಸಲಹೆಗಾರರಾದ ಜಯಾನಂದ ಖಾರ್ವಿ, ಕಾರ್ಯದರ್ಶಿ ನಾಮದೇವ ಖಾರ್ವಿ, ಖಜಾಂಚಿ ರಾಜು ನಾಯ್ಕ್,  ಗಣೇಶೋತ್ಸವ ಸಮಿತಿ ಅಧ್ಯಕ್ಷ  ಸಂತೋಷ್ ಖಾರ್ವಿ, ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರು, ಮಹಾಕಾಳಿ ಮಹಿಳಾ ಮಂಡಳಿ ಸದಸ್ಯರು,  ನವರಾತ್ರಿ ಉತ್ಸವದ ಸದಸ್ಯರು ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ತಲ್ಲೂರು ಸುನಿಲ್ ಖಾರ್ವಿ ನಿರ್ವಹಿಸಿದರು.

Leave a Reply