ತಲ್ಲೂರು: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಕ್ತದಾನ ಶಿಬಿರ, 103 ಯೂನಿಟ್ ರಕ್ತ ಸಂಗ್ರಹ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಪ್ತಸ್ವರ ವಿವಿಧೊದ್ದೇಶ ಸಹಕಾರ ಸಂಘ ರಿ. ತಲ್ಲೂರು, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಪ್ಪಿನಕುದ್ರು, ರಕ್ತನಿಧಿ ವಿಭಾಗ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಕಾರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ತಲ್ಲೂರು ಇಲ್ಲಿ ನಡೆದ ರಕ್ತದಾನ ಶಿಬಿರವನ್ನು ಶ್ರೀ ಸಿದ್ದಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಧರ್ಮದರ್ಶಿಗಳಾದ ಬಾಲಚಂದ್ರ ಭಟ್ ಉದ್ಘಾಟಿಸಿದರು.

Call us

Click Here

ಕುಂದಾಪುರ ಲಯನ್ಸ್ ಕ್ಲಬ್ ಸಿಟಿ ಸೆಂಟರ್ ಅಧ್ಯಕ್ಷರಾದ ಶಂಕರ್ ಸೇರುಗಾರ್ ಅಧ್ಯಕ್ಷತೆ ವಹಿಸಿದರು.

ಡಾ.ಆದರ್ಶ್ ಹೆಬ್ಬಾರ್, ಡಾ. ಎಚ್.ಅಶೋಕ್, ಮನೋಜ್ ಕುಮಾರ್, ಗಿರೀಶ್ ಎಸ್. ನಾಯ್ಕ್ , ಡಾ‌. ದೀಕ್ಷಾ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ರಕ್ತದಾನ ಶಿಬಿರದ ಮುಖ್ಯ ರೂವಾರಿ ಪ್ರಶಾಂತ್ ತಲ್ಲೂರು  ಹಾಗೂ ಇತರರು ಉಪಸ್ಥಿತರಿದ್ದರು.

ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 103 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Leave a Reply