ವಿದ್ಯಾವಂತರಿಗೆ ವಿದೇಶಗಳಲ್ಲಿ ಉದ್ಯೋಗ ದೊರಕಿಸಲು ಸಮೃದ್ಧ ಬೈಂದೂರು ಸೇತುವೆ: ಶಾಸಕ ಗುರುರಾಜ ಗಂಟಿಹೊಳೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆದ ತಕ್ಷಣ ಉದ್ಯೋಗ ದೊರಕಬೇಕೆಂದು ಹಲವರ ಬೇಡಿಕೆ ಇದ್ದರೂ ಕೂಡ ಅದು ಕಷ್ಟಸಾಧ್ಯ. ಈಗಾಗಲೇ ಪದವಿ ಪಡೆದವರು ಕೂಡ ಇನ್ನೂ ಉದ್ಯೋಗ ದೊರಕದೇ ಹಿಂದಿದ್ದಾರೆ. ಇನ್ನು ಕೆಲವರಿಗೆ ಉದ್ಯೋಗ ಅವಕಾಶಗಳಿದ್ದರೂ ಕೂಡ ಕೌಶಲ್ಯತೆ ಕೊರತೆ, ಭಾಷೆ, ಸ್ಥಳ ಹಾಗೂ ಕೆಲವು ತಪ್ಪು ಮಾಹಿತಿಗಳಿಂದ ಹಿಂದೇಟು ಹಾಕುತ್ತಿದ್ದಾರೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಉದ್ಯೋಗ ಅವಕಾಶಗಳು ತುಂಬಾ ಇದೆ. ಸಮೃದ್ಧ ಬೈಂದೂರು ಅಲ್ಲಿ ಹೋಗುವವರಿಗೆ ಸೇತುವೆಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಎನ್‌ಎಸ್‌ಡಿಸಿ ಹಾಗೂ ಅಜಿನೊರ‍್ಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಅಗಸ್ಟ್ 31ರಂದು ಬೃಹತ್ ಅಂತರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

Call us

Click Here

ಜಿಲ್ಲೆ, ರಾಜ್ಯಗಳಲ್ಲಿ ಹಲವಾರು ಉದ್ಯೋಗ ಮೇಳಗಳನ್ನು ವಿವಿಧ ಕಂಪೆನಿಗಳ ಮೂಲಕ ಆಯೋಜಿಸಲಾಗುತ್ತದೆ. ಆದರೆ ಮೇಳದಲ್ಲಿ ಪ್ರಕ್ರೀಯೆಗಳ ಮುಗಿದ ನಂತರ ಸಂPಪರ್ಕದ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಇದು ಮುಂದುವರಿಯದೇ ಬಾಕಿಯಾಗುತ್ತದೆ. ಬಂದೂರು ಕ್ಷೇತ್ರದ ವಿದ್ಯಾವಂತರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರದ ಯೋಜನೆಯನ್ವಯ ನಡೆಯುವ ಉದ್ಯೋಗ ಮೇಳದಲ್ಲಿ ಕರಾವಳಿಯ ಮೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಈಗಾಗಲೇ ಸುಮಾರು ೮೦೦೦ ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇzರ ಸಂಖ್ಯೆ ೧೦ ಸಾವಿರದವರೆಗೂ ವಿಸ್ತಾರವಾಗಬಹುದು. ವಿದೇಶದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಎಲ್ಲಾ ಪಧವೀಧರರಿಗೆ ಇದೊಂದು ಸವರ್ಣ ಅವಕಾಶ. ಇದು ನಮ್ಮ ಪ್ರಥಮ ಹೆಜ್ಜೆ. ಇದರ ಫಲಿತಾಂಶ ಹಾಗೂ ಯಶಸ್ಸಿನ ನಂತರ ಮುಂದಿನ ಯೋಜನೆ ಬಗ್ಗೆ ಆಲೋಚಿಸಲಾಗುವುದು ಎಂದು ಅವರು ಗುರುವಾರ ಕಾರ್ಯಕರ್ತ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಗೋಸ್ತ್೩೧ರಂದು ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಲಿದ್ದು, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಕಿರಣಕುಮಾರ್ ಕೊಡ್ಗಿ ಸೇರಿದಂತೆ ಕರಾವಳಿ ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ: ► ಆ.31ಕ್ಕೆ ಬೈಂದೂರಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಉದ್ಯೋಗ ಮೇಳ – https://kundapraa.com/?p=75665 .

ಭಾರತದಲ್ಲಿ ಜನಸಂಖ್ಯೆ ಶಾಪ ಎನ್ನುವ ಮಾತನ್ನು ಮೋದಿಯವರು ವರವಾಗಿ ಪರಿವರ್ತನೆಗೊಳಿಸಿದ್ದಾರೆ. ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಪ್ರಥಮವಾಗಿ ದೆಹಲಿಯಲ್ಲಿ ನಡೆಯಿತು. ನಂತರ ಸಂಸದ ಬಿ. ವೈ. ರಾಘವೇಂದ್ರ ಇವರ ಶಿಫಾರಸ್ಸಿನ ಮೇರೆಗೆ ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ಎರಡನೇ ಮೇಳ ನಡೆಯುತ್ತಿರುವುದು ಇಲ್ಲಿನವರ ಯೋಗಭಾಗ್ಯ. ಕೇವಲ ವಿದೇಶದಲ್ಲಿ ಉದ್ಯೋಗ ಪಡೆಯುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರಧಾನಿಯವರು ವಿವಿಧ ರಾಷ್ಟ್ರಗಳಿಗೆ ಭೇಟಿನೀಡಿ ಸ್ಕಿಲ್ ಡೆವಲಪ್ಪಮೆಂಟ್ ಅಡಿಯಲ್ಲಿ ಆ ರಾಷ್ಟ್ರಗಳಲ್ಲಿ ಭಾರತೀಯರಿಗೆ ಉದ್ಯೋಗ ಸೃಷ್ಠಿಸುವ ಬಗ್ಗೆ ರಾಜತಾಂತ್ರಿಕ ಒಪ್ಪಂದ ಮಾಡುತ್ತಾರೆ. ಅದರ ಮುಂದುವರಿದ ಭಾಗವಾಗಿ ಅಜಿನೊರ‍್ಹಾ ಸಂಸ್ಥೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಿ ಮಾನವ ಸಂಪನ್ಮೂಲ ಕೊರತೆ ಇರು ದೇಶಗಳಿಗೆ ಕಳಿಸಲಾಗುತ್ತಿದೆ. ಜಪಾನ್, ಆಸ್ಟ್ರೇಲಿಯಾ, ಇಸ್ರೆಲ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಲಕ್ಷಗಟ್ಟಲೆ ಉದ್ಯೋಗಕ್ಕೆ ಅವಕಾಶವಿದ್ದು, ಎನ್‌ಎಸ್‌ಡಿಸಿ ಇದರ ಜವಾಬ್ದಾರಿ ಹೊತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ, ಊಟ, ವಸತಿ, ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ ಜಪಾನ್ ರಾಷ್ಟ್ರದಲ್ಲಿ ವಿವಿಧ ಉದ್ಯೋಗಕ್ಕಾಗಿ ಸುಮಾರು ೮ ಲಕ್ಷ ಜನರ ಬೇಡಿಕೆ ಇದೆ ಎಂದರು.

ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ, ಅಜಿನೊರ‍್ಹಾ ಸಂಸ್ಥೆಯ ನಿರ್ದೇಶಕ ಅಜೋ ಅಗಸ್ಟಿನ್, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು ಇದ್ದರು. ಶ್ರೀಗಣೇಶ್ ಗಾಣಿಗ ವಂದಿಸಿದರು.

Click here

Click here

Click here

Click Here

Call us

Call us

ವಿದ್ಯೆ, ಉದ್ಯೋಗ, ಆರೋಗ್ಯ ಈ ಮೂರರ ಅಭಿವೃದ್ಧಿ ಸಮೃದ್ಧ ಬೈಂದೂರು ಇದರ ಪರಿಕಲ್ನನೆಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ೩೦೦ ಟ್ರೀಸ್ ಮೂಲಕ ಕಾರ್ಯಗತಗೊಳಿಸಲಾಗಿದ್ದು, ಬಂದೂರಿನಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ, ಉಪ್ಪುಂದದಲ್ಲಿ ನಮ್ಮ ಕ್ಲಿನಿಕ್ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಕಾರ್ಯಕ್ರಮದ ಯಶಸ್ಸಿಗೆ ಪಕ್ಷದ ಕಾರ್ಯಕರ್ತರು ಸಂಪೂರ್ಣ ಜವಾಬ್ದಾರಿ ಹೊತ್ತು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಸುಮಾರು ೮೦೦೦ ಉದ್ಯೋಗಾರ್ಥಿಗಳು ಸೇರುವುದರಿಂದ ಎಲ್ಲರಿಗೂ ಅನುಕೂಲವಾಗಬೇಕೆಂಬ ನೆಲೆಯಲ್ಲಿ ೫೦ ಕೌಂಟರ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲಾ ರೀತಿಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. – ಬಿ.ಎಸ್. ಸುರೇಶ್ ಶೆಟ್ಟಿ ಅಧ್ಯಕ್ಷರು, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್

Leave a Reply