ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಮ್ಮಾಡಿಯಲ್ಲಿ ನೂತನ ಹಿಂದೂಸ್ಥಾನ ಗೋಲಿ ಸೋಡಾ ಮತ್ತು ಪಾನೀಯ ಉತ್ಪಾದನಾ ಲೋಕಾರ್ಪಣೆಗೊಂಡಿತ್ತು.
ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಹೆಮ್ಮಾಡಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೇತ್ರಾವತಿ ಹಾಗೂ ಉಪ್ಪಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಳಿ ಚಂದ್ರಯ್ಯ ಆಚಾರ್ಯ, ಮಾಲಿಕರಾದ ಶಂಕರ ಆಚಾರ್ಯ, ದಿನೇಶ್ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.










