ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಹಾಗೂ ಗುರುಕುಲ ಪದವಿಪೂರ್ವ ಕಾಲೇಜು ವಕ್ವಾಡಿ, ಕೋಟೇಶ್ವರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಪುಟ್ಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಶುಕ್ರವಾರದಂದು ಜರುಗಿತು.
ಮುಖ್ಯ ಅತಿಥಿಗಳಾದ ಮಾರುತಿ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಅವರು ಮಾತನಾಡಿ, ಆಟವು ಒಂದು ವಿಶೇಷ ಚಟುವಟಿಕೆ ಸೋಲೆ ಗೆಲವುವಿನ ಸೋಪಾನ ಹಾಗೂ ಮನಸ್ಸು ಯಾವಾಗಲೂ ಧನಾತ್ಮಕ ಚಿಂತನೆ ಮಾಡಬೇಕು ಎಂದು ಉದಾಹರಣೆಗಳಿಂದ ಕೂಡಿದ ಅಮೂಲ್ಯ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಸುಭಾಶ್ಚಂದ್ರ ಶೆಟ್ಟಿ, ಜಂಟಿ ಆಡಳಿತ ನಿರ್ದೇಶಕರು, ಬಾಂಡ್ಯ ಎಜುಕೇಶನಲ್ ಟ್ರಸ್ಟ್, ಸುನಿಲ್ ಪ್ಯಾಟ್ರಿಕ್, ಪ್ರಾಂಶುಪಾಲರು ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಕೋಟೇಶ್ವರ, ಉಡುಪಿ ಜಿಲ್ಲಾ ಕ್ರೀಡಾ
ಸಂಯೋಜಕರಾದ ದಿನೇಶ್ ಶೆಟ್ಟಿ, ಕುಂದಾಪುರ ತಾಲ್ಲೂಕು ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅವಿನಾಶ್ ಆಚಾರ್ಯ ಉಪಸ್ಥಿತರಿದ್ದರು.
ಕುಂದಾಪುರ ತಾಲ್ಲೂಕು ಪದವಿಪೂರ್ವ ಕಾಲೇಜು ವ್ಯಾಪ್ತಿಯ ಒಟ್ಟು 12 ತಂಡಗಳ ಬಾಲಕ ಬಾಲಕಿಯರು ಸೇರಿ ಭಾಗವಹಿಸಿದ್ದು ಫೆೈನಲ್ ಪಂದ್ಯಾಂಟದಲ್ಲಿ ಬಾಲಕರ ವಿಭಾಗದಲ್ಲಿ ವೆಂಕಟರಮಣ ಪದವಿಪೂರ್ವ ಕಾಲೇಜು ಹಾಗೂ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ ಎರಡು ತಂಡದ ನಡುವೆ ನಡೆದಿದ್ದು, ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ಜಯಶಾಲಿಯಾಗಿದ್ದು ಈ ಎರಡು ತಂಡದಿಂದ ಆಯ್ಕೆಯಾದ ವಿದ್ಯಾರ್ಥಿಗಳು ಜೊತೆಗೆ ನಮ್ಮ ಕಾಲೇಜಿನ ಪೂರ್ಣಿಮಾ ಪಿ.ಎಸ್ ಹಾಗೂ ಕಾವ್ಯಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಹಾಗೂ ಬ್ಯಾರಿಸ್ ಕಾಲೇಜು ಕೋಡಿ ಕುಂದಾಪುರ ಎರಡು ತಂಡದ ನಡುವೆ ನಡೆದಿದ್ದು, ಬ್ಯಾರಿಸ್ ಕಾಲೇಜು ಕೋಡಿ ಕುಂದಾಪುರ ಜಯಶಾಲಿಯಾಗಿದ್ದು, ಈ ಎರಡು ತಂಡದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಜೋತೆಗೆ ನಮ್ಮ ಕಾಲೇಜಿನ ಮಲ್ಲಿಕಾರ್ಜುನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಕಾರ್ಯಕ್ರಮವನ್ನು ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ದೀಪಾ ಕಾಮತ್ ಅವರು ಸ್ವಾಗತಿಸಿ ಕನ್ನಡ ಉಪನ್ಯಾಸಕ ನಾಗರಾಜ್ ಗುಳ್ಳಾಡಿ ಅವರು ನಿರೂಪಿಸಿ ವಂದಿಸಿದರು.