ಜಡ್ಕಲ್ – ಹೊಸೂರು: ಸಿದ್ದೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಡ್ಕಲ್ – ಹೊಸೂರು  ಸಿದ್ದೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ವಂಡಬಳ್ಳಿಪಾಲ್‍ನಲ್ಲಿರುವ ಶಾಲೋಮ್ ಕಾಂಪ್ಲೆಕ್ಸ್  ಸಭಾಂಗಣದಲ್ಲಿ ಜರುಗಿತು.

Call us

Click Here

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಜೋಗಿಜಡ್ಡು ಮಾತನಾಡಿ, ಮಾರ್ಚ್ 2021ರಲ್ಲಿ ಪ್ರಾರಂಭಗೊಂಡ ಈ ಸಹಕಾರ ಸಂಘವು ಮಾರ್ಚ್ 2024ಕ್ಕೆ 1500 ‘ಅ’ ತರಗತಿ ಸದಸ್ಯರನ್ನು ಮತ್ತು ರೂ. 49.90ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 29.58 ಕೋಟಿ ವ್ಯವಹಾರ ನಡೆಸಿರುವ ನಮ್ಮ ಸಹಕಾರ ಸಂಘವು ಸದಸ್ಯರಿಗೆ ರೂ. 6.67 ಕೋಟಿ ವಿವಿಧ ಸಾಲಗಳನ್ನು ನೀಡಿದೆ. 2023-24 ರಲ್ಲಿ ರೂ. 11.8 ಲಕ್ಷ ಲಾಭಗಳಿಸಿ, ಸದಸ್ಯರಿಗೆ ಶೇ.7 ಡಿವಿಡೆಂಡ್ ನೀಡುತ್ತಿದ್ದೇವೆ ಎಂದರು. ಸಂಘದ ಯಶಸ್ವಿಗೆ ಕಾರಣಿಕರ್ತರಾದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ನಾಯ್ಕ ಹರ್ಕೋಡು, ನಿರ್ದೇಶಕರಾದ ಸುರೇಶ ನಾಯ್ಕ ಬೆಳ್ಳಾಲ, ದೇವಪ್ಪ ನಾಯ್ಕ ಮುತ್ತಾಬೇರು, ಮಂಜುನಾಥ ನಾಯ್ಕ ದಳಿ, ಮಂಜುನಾಥ ನಾಯ್ಕ ಹಳ್ಳಿಹೊಳೆ,  ರಾಮ ನಾಯ್ಕ ಏಳಜಿತ, ಶಂಕರ ನಾಯ್ಕ ಗೋಳಿಹೊಳೆ, ರವೀಂದ್ರ ನಾಯ್ಕ ಮಾರಣಕಟ್ಟೆ, ವನಿತಾ ವಿ. ಮತ್ತು ಮಲ್ಲಿಕಾ ಗೊರ್ಕಲ್ ಹಾಜರಿದ್ದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾದ ಶ್ರೀ ಮಹಾಲಿಂಗ ನಾಯ್ಕ ಜೋಗಿಜಡ್ಡು ಅವರನ್ನು ಸಂಘದ ವತಿಯಿಂದ  ಸನ್ಮಾನಿಸಲಾಯಿತು.

ಸಿಬ್ಬಂದಿಗಳಾದ ಜಯೇಶ್ ಎಚ್. ಹಾಗೂ ನಾಗರತ್ನ, ಪಿಗ್ಮಿ ಸಂಗ್ರಹಕರಾದ ಅಶೋಕ್, ಬಿಜು ಹಾಗೂ ಶೇಖರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.  ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಸುಮಾರು 500 ಸದಸ್ಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.

Click here

Click here

Click here

Click Here

Call us

Call us

ನಿರ್ದೇಶಕರಾದ ಸದಾಶಿವ ನಾಯ್ಕ ನಂದಿಗದ್ದೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಕನ್ಕಿಮಡಿ ಆರ್ಥಿಕ ವರದಿಗಳನ್ನು ಮಂಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಗೌರವ ಸಲಹೆಗಾರರಾದ ಡಾ. ರಘು ನಾಯ್ಕ ನೆರವೇರಿಸಿದರು.

Leave a Reply