Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ’ಸಕ್ಷಮ’- ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ  
    alvas nudisiri

    ’ಸಕ್ಷಮ’- ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ  

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದರೆ:
    ’ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಗಳು ನಿರ್ಮಾಣಗೊಳ್ಳಬೇಕುʼ ಎಂದು ಬಂಟರ ಮಹಿಳಾ ಸಂಘದ ಮೂಡುಬಿದಿರೆ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಹೇಳಿದರು.

    Click Here

    Call us

    Click Here

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ’ಸಕ್ಷಮ – ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಸ್ತುತ ಸಮಾಜದಲ್ಲಿ ಮಹಿಳೆ ಹಲವಾರು ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ವೇದಿಕೆಗಳ ಮೂಲಕ ಆಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬೇಕು ಎಂದು ಅವರು ಆಶಿಸಿದರು.

    ಮುಂದಿನ ದಿನಗಳಲ್ಲಿ ಸಕ್ಷಮ ಸಂಘಟನೆಯ  ಮೂಲಕ ಅನೇಕ ಸಮಾಜಮುಖಿ ಕಾರ್ಯ ನಡೆಯಲಿ. ಸಂಘಟನೆಯ ಎಲ್ಲಾ ನೂತನ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಮುತುವರ್ಜಿ ಹಾಗೂ ಚಾಕಚಕ್ಯತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.    

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ,  ಸರಿಯಾದ ಶಕ್ತಿ ಮತ್ತು ಸಾಮರ್ಥ್ಯದ ಶಕ್ತಿಯೇ ಸಕ್ಷಮ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನೈಸರ್ಗಿಕವಾಗಿ ಮಹಿಳೆಯರಲ್ಲಿ ಅಗಾಧವಾದ ಶಕ್ತಿ, ಸಹನೆ, ಧೈರ್ಯ, ಬಹುಕಾರ್ಯದ ಪ್ರವೃತ್ತಿಯ ಅಂಶ ಅಡಗಿರುತ್ತದೆ. ಅದನ್ನು ಅರಿತುಕೊಂಡು ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.

    Click here

    Click here

    Click here

    Call us

    Call us

    ’ಸಕ್ಷಮ’ವು ಮಹಿಳೆಯರಿಗೆ ಭಾವನಾತ್ಮಕ ಸಮಸ್ಯೆಗಳಿಗೂ ಪರಿಹಾರ ನೀಡುವ   ವೇದಿಕೆ ಆಗಬೇಕು. ವ್ಯಕ್ತಿತ್ವ ವೃದ್ಧಿಗೆ ವಿದ್ಯೆ, ಬುದ್ಧಿಯ ಜೊತೆ ಸುಂದರ ಮನಸ್ಸು ಕೂಡ ಅಗತ್ಯವಿದೆ ಎಂದರು.

    ಜೀವನದಲ್ಲಿ ಪ್ರತಿ ಹೆಣ್ಣು ಅನೇಕ ರೀತಿಯ ಪಾತ್ರಗಳನ್ನು ಜವಾಬ್ದಾರಿಯಿಂದ ನಡೆಸಿಕೊಂಡು ಬಂದಿರುತ್ತಾಳೆ. ಹೆಣ್ಣಿನಲ್ಲಿ ಸಹಾನುಭೂತಿ ಮಾತ್ರವಲ್ಲದೇ ಕ್ರೀಡಾ, ದೇಶಿಯ ಮನೋಭಾವ ಮತ್ತು ಸೌಂದರ್ಯ ಪ್ರಜ್ಞೆ ರೂಪುಗೊಳ್ಳಬೇಕು. ಸಕ್ಷಮ ಇಂತಹ ವಿಚಾರಗಳ ಮೇಲೆ ಆದಷ್ಟು ಬೆಳಕು ಚೆಲ್ಲಲಿ ಎಂದು ಅವರು ಆಶಿಸಿದರು

    ನಿಜವಾದ ಜೀವಕಳೆ ಮಹಿಳೆಯರಲ್ಲಿ ಅಡಗಿರುತ್ತದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅನೇಕ ಮಹಿಳೆಯರ ಬಗ್ಗೆ ಕಾಳಜಿ ಮತ್ತು ಗೌರವವಿದೆ ಎಂದು ಸಂತಸ ವ್ಯಕ್ತಪಡಿಸಿದರು.  ಮುಂದಿನ ಜನುಮವೇನಾದರೂ ಇದ್ದರೆ ತಾನು ಹೆಣ್ಣಾಗಿ ಹುಟ್ಟಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು.   

    ಬಳಿಕ ’ಸಕ್ಷಮ’ದ ನೂತನ ಪಧಾಧಿಕಾರಿಗಳಿಗೆ ಶಾಲು ಹಾಕಿ ಪದಗ್ರಹಣ ಮಾಡಿದರು. ’ಸಕ್ಷಮ’ದ ಮಾಸಿಕ ಸುದ್ದಿ ಪತ್ರ ’ಶಿರೋಸ್ʼ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ’ಸಕ್ಷಮ’ದ ಮುಂದಿನ 6 ತಿಂಗಳ ಯೋಜನೆಗಳ ವರದಿಯನ್ನು ಸಕ್ಷಮ ಆಳ್ವಾಸ್ ಮಹಿಳಾ ಸಂಘಟನೆ ಅಧ್ಯಕ್ಷೆ ಡಾ. ಮೂಕಾಂಬಿಕಾ ವಾಚಿಸಿದರು.

    ಸಕ್ಷಮ ಆಳ್ವಾಸ್ ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳು ನೇಮಕಗೊಂಡರು.  ಆಳ್ವಾಸ್ ಮಹಿಳಾ ಸಂಘಟನೆ ಅಧ್ಯಕ್ಷೆಯಾಗಿ ಡಾ. ಮೂಕಾಂಬಿಕಾ, ಉಪಾಧ್ಯಕ್ಷೆಯಾಗಿ ಡಾ. ಸುರೇಖಾ ಪೈ, ಕಾರ್ಯದರ್ಶಿ ಶಾಜಿಯಾ ಖಾನುಮ್, ಸಹ ಕಾರ್ಯದರ್ಶಿ ಡಾ. ದೀಪಾ ಕೊಠಾರಿ,  ಖಚಾಂಚಿಯಾಗಿ ಡಾ. ಕ್ಯಾಥ್ರಿನ್ ನಿರ್ಮಲಾ ಜವಾಬ್ದಾರಿ ವಹಿಸಿಕೊಂಡರು.  

    ಸಕ್ಷಮ ರೂವಾರಿ ಗ್ರೀಷ್ಮಾ ಆಳ್ವ,  ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಪ್ರಮುಖರು ಇದ್ದರು.

    ಉಪನ್ಯಾಸಕಿ ರಶ್ಮಿನ್ ತನ್ವಿರ್ ಕಾರ್ಯಕ್ರಮ ನಿರೂಪಿಸಿ, ’ಸಕ್ಷಮ’ ಕಾರ್ಯದರ್ಶಿ ಶಾಝಿಯಾ ಖಾನುಂ ವಂದಿಸಿದರು.  

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್

    04/02/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ

    04/02/2026

    ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಪವಿತ್ರ ಎ.ವಿ. ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

    03/02/2026
    Leave A Reply Cancel Reply

    two × 4 =

    Call us

    Click Here

    Call us

    Call us

    Call us
    Highest Viewed Recently
    • ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ
    • ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ
    • 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
    • ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.