ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಇಂಡಿಯನ್ ರೆಡ್ ಕ್ರಾಸ್, ಲಯನ್ಸ್ ಕ್ಲಬ್ , ಹೆಚ್.ಡಿ.ಎಫ್.ಸಿ. ಬ್ಯಾಂಕ್ ಲಿಮಿಟೆಡ್, ರೆಡ್ ರಿಬ್ಬನ್ ಕ್ಲಬ್ ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ನೌಕಾದಳ ಮತ್ತು ಭೂದಳ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಶನಿವಾರದಂದು ನಡೆಯಿತು.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಅವರು ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಆರೋಗ್ಯದ ನೆಲೆಯಲ್ಲಿ ರಕ್ತದಾನ ಒಳ್ಳೆಯದು. ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಅಲ್ಲದೆ ರಕ್ತದಾನ ಪ್ರಕ್ರಿಯೆ ಯಲ್ಲಿ ನಿಮ್ಮ ರಕ್ತದಲ್ಲಿ ಮಲೇರಿಯಾ, ಹೆಪಾಟೈಟಿಸ್ ಹೀಗೆ ಬೇರೆ ಬೇರೆ ಪರೀಕ್ಷೆ ನಡೆಯುತ್ತದೆ. ಇದರಿಂದ ನಿಮಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರದ ಭಾರತೀಯ ರೆಡ್ ಕ್ರಾಸ್ ಸಭಾಪತಿಗಳಾದ ಜಯಕರ ಶೆಟ್ಟಿ ಕೋಶಾಧಿಕಾರಿ ಶಿವರಾಂ ಶೆಟ್ಟಿ, ಲಯನ್ಸ್ ಕ್ಲಬ್ ಇದರ ಲಯನ್ ಸದಾನಂದ ನಾವಡ, ಲಯನ್ ರಾಧಾಕೃಷ್ಣ ಶೆಟ್ಟಿ, ಲಯನ್ ದಿನಕರ ಶೆಟ್ಟಿ, ಹೆಚ್.ಡಿಎಫ್.ಸಿ ಬ್ಯಾಂಕ್ ಲಿಮಿಟೆಡ್ ಇದರ ಉಪ ಪ್ರಬಂಧಕರಾದ ದೀಕ್ಷಾ. ಜಿ. ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳಾದ ಅರುಣ್ ಎ.ಎಸ್. ರಾಮಚಂದ್ರ ಆಚಾರ್ಯ, ನೌಕಾದಳ ಅಧಿಕಾರಿ ಶರಣ್ ಎಸ್. ಜೊತೆ ಮತ್ತು ಭೂದಳ ಅಧಿಕಾರಿ ಅಂಜನ್ ಕುಮಾರ್ ಎಂ.ಎಲ್.,ಯುಥ್ ರೆಡ್ ಕ್ರಾಸ್ ಘಟಕ ಸಂಯೋಜಕಿ ವಿದ್ಯಾರಾಣಿ, ರೋವರ್ಸ್ ಅಧಿಕಾರಿಗಳಾದ ಅಕ್ಷತಾ, ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ವಂದಿಸಿದರು. ವಿದ್ಯಾರ್ಥಿನಿ ಎನ್ ಸಿ.ಸಿ ಕೆಡೆಟ್ ಸಿಂಧು ಕಾರ್ಯಕ್ರಮ ನಿರೂಪಿಸಿದರು.