ಕುಂದಾಪುರ: ಪುರಸಭೆ ಕುಂದಾಪುರ, ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ರಾಮಕ್ಷತ್ರಿಯ ಸಂಘ, ಅಂಗನವಾಡಿ ಕಾರ‍್ಯಕರ್ತೆಯರ ಸಹಾಯಕಿಯರ ಸಂಘ ಆಶ್ರಯದಲ್ಲಿ ಕುಂದಾಪುರ ರಾಮಮಂದಿರದಲ್ಲಿ ಪುರಸಭೆ ವ್ಯಾಪ್ತಿಯ ಅಂಗನಾವಡಿ ಮಕ್ಕಳ ದಿನಾಚರಣೆ ನಡೆಯಿತು.
ಕುಂದಾಪುರ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣರತ್ನಾ ಉದ್ಘಾಟಿಸಿದರು. ಕುಂದಾಪುರ ಪುರಸಭೆ ಅದ್ಯಕ್ಷೆ ಕಲಾವತಿ ಯು.ಎಸ್.ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಸದಸ್ಯರಾದ ರಾಜೇಶ್ ಕಾವೇರಿ, ರವಿರಾಜ್ ಖಾರ್ವಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್.ಗುನ್ಸಾಲ್ವಿಸ್, ಸಿಡಿಪಿಓ ಸದಾನಂದ ನಾಯ್ಕ್ ಇದ್ದರು.
ಅಂಗನವಾಡಿ ಕಾರ‍್ಯಕರ್ತೆಯರ ಸಹಾಯಕಿಯರ ಸಂಘ ಅಧ್ಯಕ್ಷೆ ಉಷಾ ಕೆ.ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಗೀರಥಿ ಹೆಬ್ಬಾರ್ ಸ್ವಾಗತಿಸಿದರು. ಹರ್ಷವರ್ಧನ್ ಖಾರ್ವಿ ನಿರೂಸಿದರು. ಪ್ರೇಮಾ ವಂದಿಸಿದರು.