ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಬೈಂದೂರು, ಜೆಸಿಐ ಬೈಂದೂರು ಸಿಟಿ, ಜೆಸಿಐ ಉಪ್ಪುಂದ, ಜೆಸಿಐ ಶಿರೂರು ಮತ್ತು ಜೆಸಿಐ ಉಪ್ಪುಂದ ಸುಪ್ರಿಮ್ ನೇತೃತ್ವದಲ್ಲಿ ಕೆ.ಎಂ.ಸಿ ಮಣಿಪಾಲದ ಮೂಲಕ ಬೈಂದೂರು ಉತ್ಸವದ ಅಂಗವಾಗಿ ಮಂಗಳವಾರ ಆರೋಗ್ಯ ಮೇಳ – ದಂತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ನಂಬಿಯಾರ್ ಅವರು ಕಾರ್ಯಕ್ರಮ ಉದ್ಘಾಟನಾ ಮಾತನಾಡಿ, ಧಾವಂತದ ಬದುಕಿನ ನಡುವೆ ಪ್ರತಿಯೊಬ್ಬರು ಆರೋಗ್ಯದ ಕಾಳಜಿ ವಹಿಸುವುದು ಮುಖ್ಯ. ಸಂಘ ಸಂಸ್ಥೆಗಳ ಮುಖಾಂತರ ನಡೆಯುವ ಉಚಿತ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ವಹಿಸಿದ್ದರು. ಉತ್ಸವ ಸಮಿತಿ ಸಹ ಸಂಚಾಲಕ ಗಣೇಶ್ ಗಾಣಿಗ ಉಪ್ಪುಂದ, ಪುಪ್ಪರಾಜ ಶೆಟ್ಟಿ, ಅನುರಾಧ ಗುರುರಾಜ, ಕೆಎಂಸಿ ಮಣಿಪಾಲದ ದಂತ ವೈದ್ಯ ಡಾ. ಜಿಷ್ಣು, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್.ಕೆ., ಜೆಸಿಐ ಉಪ್ಪುಂದ ಸುಪ್ರಿಮ್ ಅಧ್ಯಕ್ಷೆ ಸುಮಾ ಆಚಾರ್ಯ, ಜೆಸಿಐ ಉಪ್ಪುಂದ ಕಾರ್ಯದರ್ಶಿ ನರಸಿಂಹ, ರೋಟರಿ ಸದಸ್ಯರಾದ ಐ. ನಾರಾಯಣ, ಪ್ರಸಾದ್ ಪ್ರಭು, ಉದಯ್ ಆಚಾರ್ ಉಪಸ್ಥಿತರಿದ್ದರು.
ರೋಟರಿ ಬೈಂದೂರು ಕಾರ್ಯದರ್ಶಿ ಸುನಿಲ್ ಹೆಚ್. ಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.