ಅರಣ್ಯ ಲೋಕದ ಮರುಸೃಷ್ಟಿ – ಕುಮ್ರಿಕಾನ್. ‌ಬೈಂದೂರು ಉತ್ಸವದ ವಿಶೇಷ ಆಕರ್ಷಣೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೈಂದೂರಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಬೈಂದೂರು ಉತ್ಸವ 2024 ಕಳೆಗಟ್ಟುತ್ತಿದ್ದು ಉತ್ಸವದ ಮುನ್ನಾದಿನ ಅರಣ್ಯ ಇಲಾಖೆಯಿಂದ ನಿರ್ಮಿಸಲಾದ ಕುಮ್ರಿಕಾನ್‌ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿದೆ. ಈ ಮೂಲಕ ಹೊಸತೊಂದು ಅರಣ್ಯಲೋಕವನ್ನೇ ಕುಮ್ರಿಕಾನ್‌ ಮೂಲಕ ಅನಾವರಣಗೊಳಿಸಲಾಗಿದೆ.

Call us

Click Here

ಅರಣ್ಯ ಲೋಕದ ಅನಾವರಣ:
ದಿನೇ ದಿನೇ ನಾಶವಾಗುತ್ತಿರುವ ಅರಣ್ಯ ಸಂಪತ್ತು. ಮನುಷ್ಯ ಆಧುನಿಕ ಜೀವನಶೈಲಿಯತ್ತ ಮುಖಮಾಡಿದಂತೆ ಮರೆಯಾಗುತ್ತಿರುವ ಅರಣ್ಯದೊಂದಿಗಿನ ನಂಟು. ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಬೈಂದೂರು ವಲಯದಿಂದ ಅರಣ್ಯಲೋಕವನ್ನು ಅನಾವರಣಗೊಳಿಸಲಾಗಿದೆ. ಇದಕ್ಕೆ ಕುಮ್ರಿಕಾನ್‌ ಎಂದು ಹೆಸರು ಇಡಲಾಗಿದೆ. ಕುಮ್ರಿ ಎಂದರೆ ಎರಡು ಬೆಟ್ಟಗಳು ಸೇರುವ ಪ್ರದೇಶ, ಕಾನ್‌ ಎಂದರೆ ಅರಣ್ಯ. ಕಾಡಿನಲ್ಲಿ ಏನೇನು ಇರಲಿದೆ. ಅಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆಗಳು ಪ್ರಕೃತಿಗೆ ಮನುಷ್ಯನಿಗೆ ಹೇಗೆ ಉಪಯೋಗ ಆಗಲಿದೆ ಕೃಷಿ ಚುಟುವಟಿಕೆಗೆ ಹೇಗೆ ಪೂರಕವಾಗಲಿದೆ ಎಂಬುದನ್ನು ತೋರಿಸಲಾಗಿದೆ. ಕುಂದಾಪ್ರ ಡಾಟ್‌ ಕಾಂ ಸುದ್ದಿ.

ದೇಗುಲಗಳ ಪ್ರತಿಕೃತಿ:
ಬೈಂದೂರು ಕ್ಷೇತ್ರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮೂಡುಗಲ್ಲು ಶ್ರೀ ಕೇಶವನಾಥ ದೇವಸ್ಥಾನ, ಕೃತಕ ಜಲಪಾತಗಳು, ಹರಿಯವ ನದಿ ಗೀಳಿಡುವ ಆನೆ, ಹುಲಿ, ಜಿಂಕೆ, ಪಕ್ಷಿಗಳ ಕಲರವ, ಕಾಂತಾರ ಕಂಬಳದ ಸೃಷ್ಟಿ, ಅರಣ್ಯದಲ್ಲಿ ಬೆಳೆಯುವ ಗಿಡಗಳ ಮಾಹಿತಿ ಹೀಗೆ ಹತ್ತಾರು ವೈವಿಧ್ಯತೆಗಳಿದ್ದು, ಒಮ್ಮೆ ಮಾತಿಲ್ಲದೇ ಒಳಹೊಕ್ಕರೆ ಅರಣ್ಯದಲ್ಲಿಯೇ ಸಂಚರಿಸಿದ ಅನುಭವವಾಗಲಿದೆ.  ಇದರೊಂದಿಗೆ ಹಳ್ಳಿಯ ಪರಿಸರ, ಶಾಲೆ, ಹಳ್ಳಿಮನೆ ಮೊದಲಾದವುಗಳ ಅನುಭವವನ್ನೂ ಕಟ್ಟಿಕೊಡಲಾಗಿದೆ. ಕುಂದಾಪ್ರ ಡಾಟ್‌ ಕಾಂ ಸುದ್ದಿ.

ಅರಣ್ಯ ಇಲಾಖೆಯ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಗಿದ್ದು, ಅರಣ್ಯ ನರ್ಸರಿ, ವಲಯ ಅಧಿಕಾರಿಗಳ ಕಛೇರಿ ಮೊದಲಾದವುಗಳ ಪ್ರತಿಕೃತಿ ನಿರ್ಮಿಸಲಾಗಿದೆ.

ಉದ್ಘಾಟನೆ:
ಅರಣ್ಯ ಇಲಾಖೆಯಿಂದ ನಿರ್ಮಿಸಲಾದ ಕುಮ್ರಿಕಾನ್‌ ವೀಕ್ಷಣೆಗೆ ತೆರೆದುಕೊಂಡಿದೆ. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್‌ ಕುಮಾರ್‌ ಕುಂದಾಪುರ ಉದ್ಘಾಟಿಸಿದರು. ಈ ವೇಳೆ ಶಾಸಕ ಗುರುರಾಜ ಗಂಟಿಹೊಳೆ, ಸಮೃದ್ಧ ಜನಸೇವಾ ಟ್ರಸ್ಟ್‌ ಅಧ್ಯಕ್ಷ ಸುರೇಶ್‌ ಶೆಟ್ಟಿ, ಉತ್ಸವದ ಸಹಸಂಚಾಲಕ ಗಣೇಶ್‌ ಗಾಣಿಗ, ಉದ್ಯಮಿಗಳಾದ ಗೋಕುಲ್‌ ಶೆಟ್ಟಿ, ಜಯಾನಂದ ಹೋಬಳಿದಾರ್‌, ವನ್ಯಜೀವಿ ವಿಭಾಗದ ಎಸಿಎಫ್ ದಿನೇಶ್, ಬೈಂದೂರು ಆರ್‌ಎಫ್‌ಓ ಸಂದೇಶ್, ಕುಂದಾಪುರ ಆರ್‌ಎಫ್‌ಓ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು. / ಕುಂದಾಪ್ರ ಡಾಟ್‌ ಕಾಂ ಸುದ್ದಿ. /

Click here

Click here

Click here

Click Here

Call us

Call us

ಇದನ್ನೂ ಓದಿ ► ಸಾಂಸ್ಕೃತಿಕ ಸಂಭ್ರಮಕ್ಕೆ ಸಜ್ಜಾದ ಬಿಂದುಪುರ – ಮೂರು ದಿನಗಳ ಕಾಲ ಬೈಂದೂರು ಉತ್ಸವ – https://kundapraa.com/?p=78600 .

Leave a Reply