ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆಯೊಂದರಲ್ಲಿ ಗಾಂಜಾವನ್ನು ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಗುಲ್ವಾಡಿಯಲ್ಲಿ ನಡೆದಿದೆ. ಗುಲ್ವಾಡಿ ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್ (40) ಹಾಗೂ ಆತನ ಪತ್ನಿ ಫಾತಿಮಾ (33) ಬಂಧಿತರು.
ಮನೆಯಲ್ಲಿದ್ದ 6.43 ಲಕ್ಷ ರೂ. ಮೌಲ್ಯದ 5 ಪ್ರತ್ಯೇಕ ಪ್ಯಾಕೆಟ್ಗಳಲ್ಲಿ ತುಂಬಿಸಿಟ್ಟಿದ್ದ 8.37 ಕೆ.ಜಿ. ಗಾಂಜಾ ಜೊತೆಗೆ ಟ್ರಾಲಿ ಸೂಟ್ಕೇಸ್, ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಳಸುತ್ತಿದ್ದ ಮೊಬೈಲ್ ಫೋನ್ಗಳನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವರಿಗೆ ಹಸೈನಾರ್ ಎಂಬಾತ ಗಾಂಜಾ ಪೂರೈಕೆ ಮಾಡಿದ್ದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.