ನವ ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಹೆಚ್ಚಿಸುವ ಅಗತ್ಯವಿದೆ: ವರದೇಶ್ ಹಿರೇಗಂಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪತ್ರಿಕೆ, ರೇಡಿಯೋ, ಟಿವಿ ಮಾಧ್ಯಮಗಳು ತಮ್ಮ ಇತಿಮಿತಿಯಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿರುವುದರಿಂದ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯವಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ನವ ಮಾಧ್ಯಮಗಳು ಲಂಗು ಲಗಾಮಿಲ್ಲದೇ ಮುನ್ನುಗ್ಗುತ್ತಿರುವುದು ಬಹಳ ಅಪಾಯಕಾರಿಯಾಗಿದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇವುಗಳಿಗೆ ಸ್ವಯಂ ನಿಯಂತ್ರಣ ಹೆಚ್ಚಿಸುವ ಅಗತ್ಯವಿದೆ ಎಂದು ಮಾಹೆ ಮಣಿಪಾಲದ ಗಾಂಯನ್ ಸೆಂಟರ್ ಫಾರ್ ಫಿಲೋಸೋಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಹೇಳಿದರು.

Call us

Click Here

ಇಲ್ಲಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವದ ಅಂಗವಾಗಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿವೃದ್ದಿ ಪತ್ರಿಕೋಧ್ಯಮ – ವಾಸ್ತವ, ಸವಾಲು ಮತ್ತು ಸಾಧ್ಯತೆಗಳು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿ, ಇತರ ಕ್ಷೇತ್ರಗಳಂತೆ ಮಾಧ್ಯಮವೂ ಕೂಡ ಬದಲಾವಣೆಗೆ ಒಗ್ಗಿಕೊಂಡು ಮುನ್ನೆಡೆಯುತ್ತಿದೆ. ಪ್ರಚಲಿತ ಸವಾಲಿನೊಂದಿಗೆ ಪತ್ರಕರ್ತ ನಿತ್ಯ ಸೆಣಸಬೇಕಿದೆ ಎಂದರು.

ಕುಂದಾಪುರ ಪತ್ರಕರ್ತ ಲಕ್ಷ್ಮೀಮಚ್ಚಿನ ಕರಾವಳಿ ಪತ್ರಿಕೋದ್ಯಮದ ಸವಾಲು ಎಂಬ ವಿಷಯದ ಬಗ್ಗೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆ ಓದುವವರ ಸಂಖ್ಯೆ ತೀರಾ ವಿರಳವಾಗಿದೆ, ಸುಮಾರು 30ರಿಂದ 60 ವರ್ಷದ ಪ್ರಾಯದ ಜನರು ಡಿಜಿಟಲ್ ಮಾಧ್ಯಮ ಕಡೆಗೆ ವಾಲಿಕೊಂಡಿದ್ದಾರೆ ಇದು ಆತಂಕಕಾರಿ ಸಂಗತಿಯಾಗಿದೆ ಎಂದ ಅವರು ಯಾವ ಉತ್ಪನ್ನ ಯುವ ಸಮಾಜದ ಕಡೆಗೆ ಹೋಗುವುದಿಲ್ಲವೋ, ಅವುಗಳು ಅವಸಾನದತ್ತಕ್ಕೆ ತಲುಪುವ ಸಾಧ್ಯತೆಯಿರುತ್ತದೆ. ಅಲ್ಲದೇ ಇಂದು ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿಯೂ ಕನ್ನಡ ಮಾತುನಾಡುವವರ ಹಾಗೂ ಓದುವರ ಸಂಖ್ಯೆ ವಿರಳವಾಗುತ್ತಿದೆ, ಇಂತಹ ಸವಾಲುಗಳನ್ನು ಮಾಧ್ಯಮ ಸಮರ್ಥವಾಗಿ ಎದುರಿಸಬೇಕಾದ ಅಗತ್ಯಯಿದೆ ಎಂದರು.

ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಅಂದುಕಾ ಎ.ಎಸ್ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಸ್. ಜನಾರ್ಧನ್‌ ಮರವಂತೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆಯೂರು, ಸಂಮೃದ್ಧ ಜನಸೇವಾ ಟ್ರಸ್ಟಿನ ಅಧ್ಯಕ್ಷ ಬಿ.ಎಸ್. ಸುರೇಶ್‌ ಶೆಟ್ಟಿ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಬೈಂದೂರು ತಾಲೂಕು ಕಾರ್ಯನಿರತ ಸಂಘದ ಕೋಶಾಧಿಕಾರಿ ಸುನಿಲ್ ಹೆಚ್. ಜಿ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ನರಸಿಂಹ ಬಿ. ನಾಯಕ್ ವಂದಿಸಿದರು.

Leave a Reply