ಕುಂದಾಪುರ: ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ ಕಾರವಾರದಿಂದ ಹಾಸನ – ಅರಸಿಕೆರೆ ಮಾರ್ಗವಾಗಿ ನೇರ ಬೆಂಗಳೂರಿಗೆ ಮತ್ತೊಂದು ರೈಲು ಆರಂಭಿಸಲು ಆಗ್ರಹಿಸಿ, ರದ್ದು ಮಾಡಿರುವ ಇಂಟರ್‌ಸಿಟಿ ರೈಲನ್ನು ಓಡಿಸಲು, ರೈಲು ಸೌಲಭ್ಯಗಳಿಂದ ವಂಚಿತರಾಗಿರುವ ಉಡುಪಿ ಜನತೆಗೆ ನ್ಯಾಯ ಒದಗಿಸಬೇಕೆಂದು ಸಿಪಿಎಂ ಪಕ್ಷ ಕಾರವಾರ-ಬೆಂಗಳೂರಿನ ರೈಲಿನಲ್ಲಿ ಪ್ರಯಾಣಿಕರಿಂದ ಕುಂದಾಪುರದಿಂದ ಚಲಿಸುವ ರೈಲಿನಲ್ಲಿ ಸಹಿ ಸಂಗ್ರಹ ಮಾಡಲಾಯಿತು. ಸುಮಾರು ೩೦೦ ಜನರು ಸಹಿ ಸಂಗ್ರಹದಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ಹೊರಗೆಡಹವಿದರು. ಸಹಿ ಸಂಗ್ರಹ ಚಳುವಳಿಯ ನೇತೃತ್ವವನ್ನು ಕುಂದಾಪುರ ವಲಯ ಕಾರ‍್ಯದರ್ಶಿ ಹೆಚ್. ನರಸಿಂಹ, ಬೈಂದೂರು ವಲಯ ಕಾರ‍್ಯದರ್ಶಿ ಸುರೇಶ್ ಕಲ್ಲಾಗರ, ಬಲ್ಕೀಸ್, ರಾಜು ದೇವಾಡಿಗ, ಗಣೇಶ್ ಬೈಂದೂರು, ಪ್ರಕಾಶ ಕೋಣಿ, ಲಕ್ಷ್ಮಣ ಡಿ. ಶ್ರೀಧರ ಉಪ್ಪುಂದ, ವೆಂಕಟೇಶ ಕೋಣಿ ಉಪಸ್ಥಿತರಿದ್ದರು.