ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದ ನಿವಾಸಿ, ಸುರೇಂದ್ರ ಅವರ ಪುತ್ರಿ ಶ್ರುತಿ (16) ಭಾನುವಾರದಂದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಅವರು ಮಧ್ಯಾಹ್ನದ ಬಳಿಕ ತೋಟದಲ್ಲಿರುವ ತೆಂಗಿನಕಾಯಿ ಹೆಕ್ಕಲು ಹೋಗಿದ್ದರು. ಸಂಜೆಯಾದರು ಮನೆಗೆ ಬಂದಿರಲಿಲ್ಲ. ನ.18ರಂದು ಹುಡುಕಾಡಿದಾಗ ತೋಟದ ನಡುವಿನಲ್ಲಿರುವ ಆವರಣವಿಲ್ಲದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಹೇಳಿದರು.
ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.