ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ 22 ವರ್ಷಗಳ ಬಳಿಕ ಡಿ. 2ರಿಂದ 5ರವರೆಗೆ ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ‘ಬೃಹತ್ ವಿಜ್ಞಾನ, ವಾಣಿಜ್ಯ, ಕಲೆ, ಪರಿಸರ ಸಾಮಾನ್ಯ ಜ್ಞಾನ ಮತ್ತು ಶೈಕ್ಷಣಿಕ ವಸ್ತು ಪ್ರದರ್ಶನ-2024’ ನಡೆಯಲಿದೆ ಎಂದು ಕಾಲೇಜಿನ ವಿಶ್ವಸ್ತ್ರ ಮಂಡಳಿ ಹಿರಿಯ ಸದಸ್ಯ ಶಾಂತಾರಾಮ ಪ್ರಭು ತಿಳಿಸಿದ್ದಾರೆ.
ಅವರು ಸೋಮವಾರ ಕಾಲೇಜಿನಲ್ಲಿ ಸುದ್ದಿಗೋಷ್ಟಿ ನಡೆಸಿ, ಡಿ.2ರಂದು ಬೆಳಗ್ಗೆ 10 ಗಂಟೆಗೆ ಪುರಮೆರವಣಿಗೆಯನ್ನು ತಹಶೀಲ್ದಾರ್ ಶೋಭಾಲಕ್ಷ್ಮಿ, ಡಿ.3ರಂದು ಶೈಕ್ಷಣಿಕ ಮಾಹಿತಿ ವಸ್ತು ಪ್ರದರ್ಶನವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ, ತಾಲೂಕು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಬೃಹತ್ ಆರೋಗ್ಯ ಮೇಳವನ್ನು ಶಾಸಕ ಗುರುರಾಜ ಗಂಟಿಹೊಳೆ ಸರಕಾರಿ ಇಲಾಖೆಗಳ ಬೃಹತ್ ವಸ್ತು ಪ್ರದರ್ಶನವನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉದ್ಘಾಟಿಸಲಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್, ಪ.ಪೂ. ಉಪನಿರ್ದೇಶಕ ಮಾರುತಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ. ಆಗಮಿಸಲಿದ್ದಾರೆ ಎಂದರು.
ಕಾಲೇಜಿನ ಟ್ರಸ್ಟಿ ಯು.ಎಸ್. ಶೆಣೈ ಅವರು ಮಾತನಾಡಿ ಕಾಲೇಜು ವಿದ್ಯಾರ್ಥಿಗಳ ವಸ್ತು ಪ್ರದರ್ಶನ ನಡೆಯಲಿದ್ದು, ಬೃಹತ್ ವಸ್ತು ಪ್ರದರ್ಶನದ ಮಳಿಗೆ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾಜಿ ಶಾಸಕ ಗೋಪಾಲ ಪೂಜಾರಿ, ಉದ್ಯಮಿ ದಿನೇಶ್ ಹೆಗ್ಡೆಮೊಳಹಳ್ಳಿ ಕಲಾಕ್ಷೇತ್ರ ಅಧ್ಯಕ್ಷಕಿಶೋರ್ ಕುಮಾರ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕಾಸ್ಟೋ, ಬಿಇಒ ಶೋಭಾ ಶೆಟ್ಟಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಭಾಗವಹಿಸಲಿದ್ದಾರೆ ಎಂದರು.
ಡಿ. 4ರಂದು ವೃತ್ತಿ ಮಾರ್ಗದರ್ಶನ ಕೈಗಾರಿಕಾ ಮಾಹಿತಿ ಶಿಬಿರ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ.
ಡಿ. 5 ಸಮಾರೋಪ ಸಮಾರಂಭದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಲೆಕ್ಕ ಪರಿಶೋಧಕಿ ಶಾಂತಿ ಗಿರಿಧರ್, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ ಆಗಮಿಸಲಿದ್ದಾರೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ, ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗೊಂಡ ಉಪಸ್ಥಿತರಿದ್ದರು.