ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದೊಂದಿಗೆ ಎಚ್‌ಐವಿ / ಏಡ್ಸ್ ಅರಿವು ಕಾರ್ಯಕ್ರಮ ಬುಧವಾರದಂದು ನಡೆಯಿತು.
ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಇಂದಿನ ಯುವ ಸಮೂಹ ಹೇಗೆ ತಮ್ಮನ್ನು ಸಮಾಜದ ಆರೋಗ್ಯವಂತ ಪೀಳಿಗೆಯಾಗಿ ಮಾರ್ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಸರಕಾರಿ ತಾಲ್ಲೂಕು ಆಸ್ಪತ್ರೆಯ ಕೌನ್ಸಿಲರ್ ಆಗಿರುವ ನಳಿನಾಕ್ಷಿ ಅವರು ಎಚ್‌ಐವಿ ಹಾಗೂ ಏಡ್ಸ್ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿ ಅದರ ಮುನ್ನೆಚ್ಚರಿಕೆಯ ಆವಶ್ಯಕತೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಹದಿ ಹರೆಯದ ವಯಸ್ಸಿನಲ್ಲಿ ಎಚ್‌ಐವಿಯ ಅರಿವು ಅತ್ಯವಶ್ಯಕ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಜಯಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ಹಸ್ತಾಂತರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಕಾರ್ಯದರ್ಶಿಗಳಾಗಿರುವ ಸತ್ಯನಾರಾಯಣ ಪುರಾಣಿಕ್, ಖಜಾಂಚಿಗಳಾಗಿರುವ ಶಿವರಾಮ ಶೆಟ್ಟಿ, ಕಾಲೇಜಿನ ಉಪಪ್ರಾಂಶುಲರಾದ ಡಾ| ಚೇತನ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ ಸ್ವಾಗತಿಸಿ, ಮಾಲತಿ ಕುಂದರ್ ವಂದಿಸಿದರು. ಯುವ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರು ಪ್ರಾರ್ಥಿಸಿದರು. ವೈ. ಆರ್. ಸಿ. ಸ್ವಯಂಸೇವಕಿ ಸನ್ಮಿತಾ ದ್ವಿತೀಯಾ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು.















