ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್: ಶಾಲಾ ವಾರ್ಷಿಕೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತೆಕ್ಕಟ್ಟೆ, ವಿಶ್ವ ವಿನಾಯಕ ಸಿ.ಬಿ.ಎಸ್.ಇ ಶಾಲೆಯ 19ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

Call us

Click Here

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಎಮ್ ವಿದ್ಯಾಸಂಸ್ಥೆಗಳ ಆಡಳಿತ ಮುಖ್ಯಸ್ಥರಾದ ಪ್ರಕಾಶ್ಚಂದ್ರ ಶೆಟ್ಟಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಲಿಸಿದರೆ ಅಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು. ಮಕ್ಕಳು ಮನೆಯಲ್ಲಿ ತಂದೆ ತಾಯಿಯಿಂದ ಸಂಸ್ಕಾರ ಕಲಿಯುತ್ತಾರೆ ತಂದೆ ತಾಯಿಗಳು ಹಾಗೂ ಗುರು ಹಿರಿಯರು ಮಕ್ಕಳಿಗೆ ಆದರ್ಶರೂಪವಾಗಿದ್ದರೆ ನಾವು ಉತ್ತಮ ಸಮಾಜವನ್ನು ಕಟ್ಟಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಗೌರವ ಅತಿಥಿಗಳಾದ ಡಾ. ಶರಣ್ಯ ಶೆಟ್ಟಿಯವರು ಮಾತನಾಡಿ ಮಕ್ಕಳ ಯೌವನಾವಸ್ಥೆಯಲ್ಲಿ ಮಕ್ಕಳ ಮನಸ್ಸನ್ನು ಅರಿತು ಮಕ್ಕಳಲ್ಲಿನ ಆತಂಕ ಭಯವನ್ನು ಹೋಗಲಾಡಿಸುವುದು ಶಿಕ್ಷಕರ ಹಾಗೂ ಪೋಷಕರ ಕರ್ತವ್ಯವಾಗಿದೆ. ಹದಿಹರೆಯದ ಮಕ್ಕಳ ಮಾನಸಿಕ ತುಮುಲಗಳನ್ನು ದೂರವಾಗಿಸಲು ಆತ್ಮೀಯ ಸಂವಹನದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸ ಪೋಷಕರಿಂದ ಆಗಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಶಾಲೆಯಲ್ಲಿ ಪ್ರಾರಂಭಿಸಿದ ನೂತನ ಸೌಲಭ್ಯಗಳಾದ ಬಾಸ್ಕೆಟ್ ಬಾಲ್ ಕೋರ್ಟ್, ಮಕ್ಕಳ ಪ್ಲೇ ಪಾರ್ಕ್ ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳ ಕುರಿತು ತಿಳಿಸಿದರು. ಶಾಲಾ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಮಹತ್ತರವಾದ ಪಾತ್ರ ಹಾಗೂ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿಯವರು ಮಾತನಾಡಿ ಪೋಷಕರ ಸಹಕಾರವನ್ನು ಸ್ಮರಿಸಿದರು.

ವೇದಿಕೆಯಲ್ಲಿ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಸುಧಾಕರ ಶೆಟ್ಟಿ ಹಾಗೂ ಬಿ. ಸೀತಾರಾಮ ಶೆಟ್ಟಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಟ್ರಸ್ಟಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರುಗಳಾದ ಕರುಣಾಕರ ಶೆಟ್ಟಿ, ಉಪ ಪ್ರಾಂಶುಪಾಲರು ಕೆ.ಪಿ,ಎಸ್ ಬಿದ್ಕಲ್‌ಕಟ್ಟೆ, ಸೀತಾರಾಮ ಶೆಟ್ಟಿ, ಮುಖ್ಯ ಶಿಕ್ಷಕರು, ಹಂಗಳೂರು, ಶ್ರೀನಿವಾಸ ಶೆಟ್ಟಿ ಪ್ರಬಾರ ಮುಖ್ಯ ಶಿಕ್ಷಕರು ಗೋಪಾಡಿ ಇವರನ್ನು ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ಹಂಸವಿ, ಶ್ಲಾಘ  ಸಾಲಿಗ್ರಾಮ, ಯಕ್ಷತ್ ಶೆಟ್ಟಿ ಹಾಗೂ ದಿವಿನ್ ಪಿ ಶೆಟ್ಟಿಯವರಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಮನೋರಂಜನಾ ಕಾರ‍್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಂಸ್ಥೆಯ ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ ವರದಿ ವಾಚಿಸಿದರು, ವೈಷ್ಣವಿ ಸ್ವಾಗತಿಸಿ, ಪರಿಚಯಿಸಿ, ಫಾತಿಮ ಜಾಹರಾ ಹಾಗೂ ಬಿಂದುಶ್ರೀ ನಿರೂಪಿಸಿ, ಹಂಸವಿ ವಂದಿಸಿದರು.     

Leave a Reply