ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇರಳದ ಮುಹಮ್ಮದ್ ಮುನ್ಸೀರ್ (24) ಅವರ ಬೆಲೆ ಬಾಳುವ ಐಫೋನ್ ರೈಲಿನಲ್ಲಿ ಕಳವಾಗಿದೆ.
ಅವರು ಗಂಗಾನಗರ-ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಡಗಾಂವ್‌ನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದು ರೈಲು ಕುಂದಾಪುರಕ್ಕೆ ತಲುಪಿದಾಗ 1.50 ಲಕ್ಷ ರೂ.ಗಳ ಐಫೋನ್ 16 ಪ್ರೊ ಮೊಬೈಲ್ ಕಳವಾಗಿರುವುದು ಗಮನಕ್ಕೆ ಬಂತು. ಮುನ್ಸಿರ್ ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದನ್ನು ಕುಂದಾಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.










