ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಘಟಕ ಅಳವಡಿಸಿರುವುದು ಶ್ಲಾಘನೀಯ: ಜಿಲ್ಲಾಧಿಕಾರಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಸ್ವಾಭಾವಿಕವಾಗಿ ಲಭ್ಯವಿರುವ ಸೌರಶಕ್ತಿ ಬಳಕೆಯಿಂದ ವಿದ್ಯುತ್ ಶಕ್ತಿ ಉತ್ಪಾದನೆಯ ಸೋಲಾರ್ ಘಟಕಗಳನ್ನು ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಅಳವಡಿಸಿದ ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

Call us

Click Here

ಅವರು ಅಂದು ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯ ಶ್ರೀ ಕೃಷ್ಣ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಘಟಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳ ಮುಖ್ಯಸ್ಥರಿಗೆ ಸೂರ್ಯ ನಮಸ್ಕಾರ– ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲೆಯ ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳು ಸೋಲಾರ್ ಅಳವಡಿಸುವ ಮೂಲಕ ಅನುಕೂಲ ಮಾಡಿಕೊಟ್ಟಿವೆ. ಕಚೇರಿಯ ಕೆಲಸ ಕಾರ್ಯಗಳಲ್ಲಿ ಅನೇಕ ಸಲ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಕೈಕೊಟ್ಟಾಗ ಸಮಸ್ಯೆ ಎದುರಿಸುತ್ತೇವೆ. ಆರೋಗ್ಯ ಸಂಸ್ಥೆಗಳಲ್ಲಿ ವಿದ್ಯುತ್ ಸರಬರಾಜು ನಿರಂತರವಾಗಿರಬೇಕು. ರೋಗಿಗಳಿಗೆ, ಲಸಿಕೆಯನ್ನು ಸಂಸ್ಕರಿಸಿಡಲು ವಿದ್ಯುತ್ ಅವಶ್ಯಕತೆ ಇದೆ. ಎರಡೂ ಸಂಸ್ಥೆಗಳು ಪಿ.ಹೆಚ್.ಸಿ ಗಳಿಗೆ ಸೋಲಾರ್ ಘಟಕಗಳನ್ನು ಅಳವಡಿಸುವ ಮೂಲಕ ಸಿ.ಆರ್.ಎಸ್ ಫಂಡ್ ಅನ್ನು ಜವಬ್ದಾರಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಬಳಕೆ ಮಾಡಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ವಿದ್ಯುತ್ ಬಿಲ್ ಭರಿಸುವುದು ಸಮಸ್ಯೆ ಉಂಟಾಗುತ್ತಿದೆ. ಇವುಗಳಿಗೂ ಸೋಲಾರ್ ಶಕ್ತಿಯ ಅವಶ್ಯಕತೆ ತುಂಬಾ ಇದೆ. ಮುಂದಿನ ದಿನಗಳಲ್ಲಿ ದಾನಿಗಳ ಸಹಕಾರದಿಂದ ಅಳವಡಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಸೋಲಾರ್ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದ್ದು, ಆದ್ದರಿಂದ ಕೇಂದ್ರ ಸರ್ಕಾರವು ಹರ್ ಘರ್ ಸೂರ್ಯ ಯೋಜನೆಯಡಿ ಮನೆ ಮನೆಗೆ ಸೋಲಾರ್ ವಿದ್ಯುತ್ ಯೋಜನೆಯನ್ನು ಜಾರಿಗೆ ತರುವುದರೊಂದಿಗೆ ಸಾಲ ಹಾಗೂ ಸಬ್ಸಿಡಿಯನ್ನು ಸಹ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯ ಕಾರ್ಬನ್ ಅಮೀಷನ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ತರ ಸಾಧನೆಯಾಗಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶೂನ್ಯ ಇಂಗಾಲ, ಝೀರೋ ಕಾರ್ಬನ್ ಹಾಗೂ ಗ್ರೀನ್ ಎನರ್ಜಿ ಪರಿಕಲ್ಪನೆ ಅಡಿಯಲ್ಲಿ ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಹೇರಳವಾಗಿ ಲಭ್ಯವಿರುವ ಸೌರಶಕ್ತಿಯನ್ನು ಬಳಸಿಕೊಳ್ಳುವ ದೃಷ್ಠಿಯಿಂದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಲಾಗಿದೆ ಎಂದರು.

Click here

Click here

Click here

Click Here

Call us

Call us

ದೈನಂದಿನ ಜೀವನದಲ್ಲಿ ಎನರ್ಜಿ ಪಾತ್ರ ಬಹುಮುಖ್ಯವಾದುದು. ಚೀನಾ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಎನರ್ಜಿ ಬಳಕೆ ಕಡಿಮೆಯಿದೆ. ಜಿಲ್ಲೆಯಲ್ಲಿ ಹಲವಾರು ರೀತಿಯ ಅಭಿವೃದ್ಧಿಗಳು ನಡೆಯುತ್ತಿದ್ದು, ಈಗಾಗಲೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೋಲಾರ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಅಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿ ಗುರುತಿಸುವಂತಾಗಿದೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಜಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಉಡುಪಿ ಜಿಲ್ಲೆಯು ಸರಕಾರದ ಅನುದಾನವಿಲ್ಲದೇ ದಾನಿಗಳ ಸಹಾಯದಿಂದ ಜಿಲ್ಲೆಯ ಎಲ್ಲಾ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಘಟಕ ಅಳವಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಗ್ಲೋಬಲ್ ವಾರ್ಮಿಂಗ್‌ಗೆ ಮೂಲ ಕಾರಣ ಕಾರ್ಬನ್ ಅಮೀಷನ್. ಇದನ್ನು ಶೂನ್ಯಕ್ಕೆ ತರದಿದ್ದಲ್ಲಿ ಮುಂದಿನ ದಿನಗಳಲ್ಲಿ ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದ ಅವರು, ಸೋಲಾರ್ ಎಷ್ಟೇ ಬಳಸಿದರೂ ಸಹ ಖಾಲಿಯಾಗದಂತೆ ಶಕ್ತಿಯ ಮೂಲವಾಗಿದೆ ಎಂದರು.

ಸೋಲಾರ್ ಘಟಕ ಅಳವಡಿಸಿಕೊಂಡ ಪೆರ್ಣಂಕಿಲ, ಕರ್ಜೆ ಹಾಗೂ ಕುಂಭಾಶಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯಿಂದ ಶ್ರವಣದೋಷವುಳ್ಳ ಇಬ್ಬರು ಫಲಾನುಭವಿಗಳಿಗೆ ಶ್ರವಣಯಂತ್ರವನ್ನು ವಿತರಿಸಲಾಯಿತು.

ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಣಿಪಾಲ ಟೆಕ್ನಾಲಜೀಸ್ ಸಂಸ್ಥೆಯ ಗ್ರೂಪ್ ಚೀಫ್ ಹೆಚ್.ಆರ್ ಆಫೀಸರ್ ಪ್ರಮೋದ್ ಎನ್ ಫರ್ನಾಂಡೀಸ್, ಮಣಿಪಾಲ ಟೆಕ್ನಾಲಜೀಸ್ ಜೆನರಲ್ ಮ್ಯಾನೆಜರ್ ರೊನಾಲ್ಡ್ ಡಿಸೋಜಾ, ಸೆಲ್ಕೋ ಫೌಂಡೇಶನ್‌ನ ಅಡಿಷನಲ್ ಜೆನರಲ್ ಮ್ಯಾನೆಜರ್ ಗುರುಪ್ರಕಾಶ್ ಶೆಟ್ಟಿ, ಸೆಲ್ಕೋ ಫೌಂಡೇಶನ್ ಏರಿಯಾ ಮ್ಯಾನೆಜರ್ ಸುರೇಶ್ ನಾಯ್ಕ್ ಮತ್ತು ಶೇಖರ್ ಶೆಟ್ಟಿ, ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಆಡಳಿತ ವೈದ್ಯಾಧಿಕಾರಿಗಳು, ಮಣಿಪಾಲ ಟೆಕ್ನೋಲಾಜಿಸ್ ಮತ್ತು ಸೆಲ್ಕೋ ಫೌಂಡೇಶನ್ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್ ಸ್ವಾಗತಿಸಿ, ಡಿ.ಹೆಚ್.ಓ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಸತೀಶ್ ರಾವ್ ನಿರೂಪಿಸಿದರು. 

Leave a Reply