Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೈ ಜುಮ್ ಎನ್ನುವಂತಿದೆ ‘ಕರಾವಳಿ’ ಟೀಸರ್. ‘ಪ್ರತಿಷ್ಠಿಯ ಪಿಚಾಚಿ’ಗೆ ಫ್ಯಾನ್ಸ್ ಫಿದಾ
    ಊರ್ಮನೆ ಸಮಾಚಾರ

    ಮೈ ಜುಮ್ ಎನ್ನುವಂತಿದೆ ‘ಕರಾವಳಿ’ ಟೀಸರ್. ‘ಪ್ರತಿಷ್ಠಿಯ ಪಿಚಾಚಿ’ಗೆ ಫ್ಯಾನ್ಸ್ ಫಿದಾ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಕರಾವಳಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. 2025ರ ಬಹುನಿರೀಕ್ಷೆಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕರಾವಳಿ ಸಿನಿಮಾ ಕೂಡ ಜಾಗ ಗಿಟ್ಟಿಸಿಕೊಂಡಿರುವುದು ವಿಶೇಷ.

    Click Here

    Call us

    Click Here

    ಪೋಸ್ಟರ್ಸ್ ಮತ್ತು ಟೀಸರ್ ಮೂಲಕ ಈಗಾಗಲೇ ಕುತೂಹಲ ಹೆಚ್ಚಿಸಿರುವ ಕರಾವಳಿ ಹೊಸ ವರ್ಷದ ಪ್ರಯುಕ್ತ ಮತ್ತೊಂದು ಭರ್ಜರಿ ಟೀಸರ್ ಮೂಲಕ ಸಿನಿ ಅಭಿಮಾನಿಗಳ ಮುಂದೆ ಬಂದಿದೆ.

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ಗಾಣಿಗ ನಿರ್ದೇಶನದ ಕರಾವಳಿಯ ವಿಭಿನ್ನವಾದ ಟೀಸರ್ ಆಕರ್ಷಕವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

    ಸಾಮಾನ್ಯವಾಗಿ ಟೀಸರ್ ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಕರಾವಳಿಯಿಂದ ಬಂದಿರುವ ಹೊಸ ಟೀಸರ್ ಒಂದು ಪ್ರತಿಷ್ಠಿಯ ವಸ್ತುವಿನ ಮೇಲೆ ಇರುವುದು ವಿಶೇಷ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪ್ರತಿಷ್ಠಿಯ ಕುರ್ಚಿ ಹೈಲೆಟ್. ಅದು ಬರಿ ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ ಕಣ್ಣಿಟ್ಟವರನ್ನು ಬಿಡಲ್ಲ ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಮೈ ಜುಮ್ ಎನ್ನುವಂತಿದೆ.

    ಅಂದಹಾಗೆ ಕರಾವಳಿ ಕಂಬಳ ಪ್ರಪಂಚದ ಬಗ್ಗೆ ಇರುವ ಸಿನಿಮಾ. ಈ ಮೊದಲು ರಿಲೀಸ್ ಆಗಿರುವ ಟೀಸರ್ ನಲ್ಲಿ ಒಂದು ಮಗು ಜನಿಸುತ್ತದೆ ಅದೇ ಸಮಯಕ್ಕೆ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನವು ಆಗುತ್ತೆ. ಸದ್ಯ ರಿಲೀಸ್ ಆಗಿರುವ ಟೀಸರ್ ಮುಂದುವರೆದ ಭಾಗ ಎಂಬಂತೆ ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠಿಯ ಕುರ್ಚಿಯನ್ನು ನೋಡುತ್ತಾ ಬೆಳೆದವನು,  ಆ ಕುರ್ಚಿಯ ಮೇಲೆ ಎಲ್ಲರ ಕಣ್ಣು ಬಿದ್ದಿರುವುದು ಈ ಟೀಸರ್ ನಲ್ಲಿ ಗೊತ್ತಾಗುತ್ತಿದೆ. ನಟ ಮಿತ್ರ ಘರ್ಜನೆ ರಮೇಶ್ ಇಂದಿರ ಅವರ ಕ್ರೌರ್ಯತ್ವ ಕೂಡ ಟೀಸರ್ ನಲ್ಲಿ ಕಾಣಬಹುದು. ಕೆಕೆ ಮಠ ಹಾಗೂ ಟೀಸರ್ ನ ಕೊನೆಯಲ್ಲಿ ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಪ್ರಜ್ವಲ್ ದೇವರಾಜ್ ಕೂಡ ತುಂಬಾ ಇಂಟ್ರಸ್ಟಿಂಗ್ ಎನಿಸುತ್ತಿದ್ದಾರೆ.

    Click here

    Click here

    Click here

    Click Here

    Call us

    Call us

    ಈ ಸಿನಿಮಾದಿಂದ ಈಗಾಗಲೇ ಪ್ರಜ್ವಲ್ ದೇವರಾಜ್ ಅವರ ಮೂರು ರೀತಿಯ ಲುಕ್ ರಿವೀಲ್ ಆಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಕೂಡ ಮೂಡಿಸಿದೆ.

    ಕರಾವಳಿ ಈಗಾಗಲೇ 80ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ  ನಿರ್ಮಾಣವಾಗುತ್ತಿದೆ.

    ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    five + seventeen =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.