ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೇಸಿಐ ವಲಯ 15ರ ಉಪ್ಪುಂದ ಜೇಸಿಐ ಘಟಕವು 2024ನೇ ಸಾಲಿನಲ್ಲಿ ನಡೆಸಿದ ವಿವಿಧ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ – ತರಬೇತಿಗಳು, ಸಾಮಾಜಿಕ ಅರಿವು, ಆರೋಗ್ಯ – ಜಾಗೃತಿಯ ಕಾರ್ಯಕ್ರಮಗಳು ಹೀಗೆ ವಿವಿಧ ಹಂತದ ಕಾರ್ಯಕ್ರಮಗಳಿಗಾಗಿ ಜೇಸಿಐ ಭಾರತದಿಂದ ಪ್ರತಿಷ್ಠಿತ 100% ಎಫಿಸಿಯೆನ್ಸಿ ಅವಾರ್ಡ್ ಹಾಗೂ ಎಂಪವರಿಂಗ್ ಯೂತ್ ಅವಾರ್ಡ್‌ನ್ನು ನೀಡಿ ಗೌರವಿಸಲಾಯಿತು.
ಉಪ್ಪುಂದ ಜೇಸಿಐನ 2024ರ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಅವರಿಗೆ ಹೈದರಾಬಾದ್‌ನ ನವಾಟಲ್ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್ ಹೋಟಲ್‌ನಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವೋಕೇಟ್ ರಿಕೇಶ್ ಶರ್ಮಾ ಅವರು ಅವಾರ್ಡ್‌ನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಲೀಡರ್ ಸೀರೀಸ್ ತರಬೇತಿಯನ್ನು ಅತ್ಯುತ್ತಮವಾಗಿ ನಡೆಸಿದ ಬಗ್ಗೆ ಸಿಲ್ವರ್ ಕಾಯಿನ್ ಅವಾರ್ಡ್, ಎಂಪವರಿಂಗ್ ಯೂತ್ ಅತ್ಯುತ್ತಮ ಆಯೋಜನೆಯ ಬಗ್ಗೆ ಎಕ್ಸೆಲೆಂಟ್ ಅವಾರ್ಡ್ ಹಾಗೂ ಎಲ್.ಜಿ.ಬಿ. ಮೀಟಿಂಗ್, ಉದ್ಯೋಗ ಮೇಳ, ಚುನಾವಣಾ ಜಾಗೃತಿ ಕಾರ್ಯಕ್ರಮ, ಮಿಶನ್ ಒನ್ ಲಾಕ್ ,ಇಪಿಎಸ್, ಸಿಎಪಿಪಿ, ಜೇಸಿ ಕೋರ್ಸ್ ಸಂಘಟನೆ, ಫ್ಯೂಚರ್ ಕಾರ್ಯಕ್ರಮ, ದಾನ್ ಕಾರ್ಯಕ್ರಮ ಹೀಗೆ ಜೇಸಿಐ ಭಾರತ ಸೂಚಿಸಿದ ವಿವಿಧ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳನ್ನು ಆಯೋಜಿಸಿದ ಬಗ್ಗೆ ಪ್ರಶಂಸಾ ಪ್ರಮಾಣಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಜೇಸಿಐ ಸೆನಿಟರ್ ಗಿರೀಶ್ ಎಸ್.ಪಿ., ಜೇಸಿಐ ಸೆನಿಟರ್ ಅಭಿಲಾಷ್ ಬಿ.ಎ. ರಾಷ್ಟ್ರೀಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ವಿಘ್ನೇಶ್ ಪ್ರಸಾದ್, ಉಪ್ಪುಂದ ಲೇಡಿ ಜೇಸಿ ಕೋಆರ್ಡಿನೇಟರ್ ಸುಮನಾ ಮುಂತಾದವರು ಉಪಸ್ಥಿತರಿದ್ದರು.