ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ನೋಂದಣಿ, ಉತ್ಪನ್ನದ ಗುಣಮಟ್ಟದ ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ರಮಗಳಾದ ವೆಬ್‌ಸೈಟ್ ಜಾಹೀರಾತು, ಸಾಮಾಜಿಕ ಜಾಲತಾಣದ ಬಳಕೆ, ಕೃಷಿ ಆಪ್ಸ್ ಬಳಕೆ, ರಫ್ತಿಗೆ ಸಹಾಯಧನ, ವ್ಯಾಪಾರ ಮಳಿಗೆಗಳಲ್ಲಿ ಬಾಡಿಗೆ ಆಧಾರದಲ್ಲಿ ಶೆಲ್ಫ್ ಪಡೆಯುವುದು ಮತ್ತು ಪ್ಯಾಕೇಜಿಂಗ್ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಗರಿಷ್ಠ 5 ಲಕ್ಷ ರೂ. ವರೆಗೆ ಸಹಾಯಧನ ಪಡೆಯಲು ಅವಕಾಶವಿದೆ.

Call us

Click Here

ಈಗಾಗಲೇ ಸ್ಥಾಪಿಸಿ ಚಾಲನೆಯಲ್ಲಿರುವ ಮೌಲ್ಯವರ್ಧನೆ ಸರಪಳಿಯಲ್ಲಿನ ಚಟುವಟಿಕೆಗಳ ಉನ್ನತೀಕರಣ/ ಬಲವರ್ಧನೆ ಚಟುವಟಿಕೆಗಳಿಗೆ ಯೋಜನಾ ವರದಿಯ ಶೇ. 50 ರ ಸಹಾಯಧನದಲ್ಲಿ ಬ್ಯಾಂಕ್ ಸಾಲದ ಮುಖಾಂತರ ಗರಿಷ್ಠ 10 ಲಕ್ಷ ರೂ. ಮೀರದಂತೆ ಅನುಷ್ಠಾನಗೊಳಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಗುಂಪುಗಳು ಮತ್ತು ರೈತ ಸಾವಯವ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಡಿ ರೈತ ಉತ್ಪಾದಕ ಸಂಸ್ಥೆಗಳ 2 ರಿಂದ 3 ಪ್ರತಿನಿಧಿಗಳಿಗೆ ಉತ್ಪಾದನಾ ಪದ್ಧತಿ ಗ್ರೇಡಿಂಗ್, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ, ರಫ್ತು ವಿಷಯಗಳ ಕುರಿತು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ತರಬೇತಿ ಹಮ್ಮಿಕೊಂಡಿದ್ದು, ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೇಲ್ಕಂಡ ಚಟುವಟಿಕೆಗಳಿಗೆ ಅರ್ಜಿ ಸಲ್ಲಿಸುವ ಸಂಸ್ಥೆಗಳು/ಉದ್ಯಮಿಗಳ ಕಾರ್ಯಚಟುವಟಿಕೆಯನ್ನು ಜಿಲ್ಲಾ ಮಟ್ಟದ ತಂಡವು ಪರಿಶೀಲಿಸಿ ಅಂತಿಮವಾಗಿ ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಗುವುದು.

ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಗುಂಪುಗಳು ಮತ್ತು ರೈತ ಸಾವಯವ ಒಕ್ಕೂಟಗಳು ಮೇಲ್ಕಂಡ ಅರ್ಹ ಚಟುವಟಿಕೆಗಳಿಗೆ ತಮ್ಮ ಅರ್ಜಿಯನ್ನು ಜನವರಿ 18 ರ ಒಳಗಾಗಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Click here

Click here

Click here

Click Here

Call us

Call us

Leave a Reply