ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಂಗಳೂರು ಸಮೀಪ ಚಾಲಕನಿಲ್ಲದೇ ಬಸ್ ಚಲಿಸಿ ಕಾರಿಗೆ ಡಿಕ್ಕಿಯಾದ ಘಟನೆ ಸೋಮವಾರ ನಡೆದಿದೆ.
ಸರ್ವಿಸ್ ಸೆಂಟರಿನಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಚಾಲಕನೇ ಇಲ್ಲದೆ ಬಸ್ ಏಕಾಏಕಿಯಾಗಿ ಎರಡು ಸರ್ವಿಸ್ ರೋಡ್ ಮತ್ತು ರಾಷ್ಟ್ರೀಯ ಹೆದ್ದಾರಿ ದಾಟಿ ಕಾರಿಗೆ ಡಿಕ್ಕಿ ಹೊಡೆದಿದ್ದು. ಕಾರು ಅಪ್ಪಚ್ಚಿಯಾಗಿದೆ.
ಈ ಅಪಘಾತವು ವಾಣಿಜ್ಯ ಸಂಕೀರ್ಣದ ಸಿ. ಸಿ. ಟಿ. ವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಚಾಲಕನಿಲ್ಲದ ಬಸ್ಸನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದು ಅದೃಷ್ಟವಷಾತ್ ಸಾರ್ವಜನಿಕರು ಇತರ ವಾಹನಗಳು ಪಾರಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.