ಕೊಡಿ ಹಬ್ಬ: ಸಹಸ್ರ ಭಕ್ತ ಸಮೂಹದೊಂದಿಗೆ ಸಂಭ್ರಮದಿ ಜರುಗಿದ ಮನ್ಮಹಾರಥೋತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Click Here

ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಬೆಳಗ್ಗೆ 10.45ರಿಂದ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿ ಪ್ರಸನ್ನ ಕುಮಾರ ಐತಾಳ್ ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ 5.15ಗಂಟೆಗೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಲೆವೂರು ಶ್ರೀ ವಿಷ್ಟುಪೂರ್ತಿ ಸೇವಾ ಬಳಗದವರ ಚಂಡೆ ವಾದನ, ಹಾಗೂ ಕೆರಳ ಚಂಡೆ ವಾದನ, ಉಡುಪಿಯ ಮಂಜುಷಾ ಮಹಿಳಾ ಚಂಡೆ ಬಳಗ ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ದಾವಣಗರೆಯ ಕೆ.ವಿ. ಆನಂದರಾವ್ ಮತ್ತು ಮಕ್ಕಳಿಂದ ಉಚಿತ ಪಾನಕ ವ್ಯವಸ್ಥೆ, ಕೋಟೇಶ್ವರ ಹಿಂದೂ ಜಾಗರಣ ವೇದಿಕೆಯಿಂದ ಉಚಿತ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ ಸುತ್ತುಹೊಡೆಯುತ್ತಿರುವಂತೆಯೇ ರೋಮಾಂಚನಗೊಂಡರು. ಕೊಡಿಹಬ್ಬದ ಅಂಗವಾಗಿ ನಗರದ ಬೀದಿಗಳು ಸಿಂಗಾರಗೊಂಡಿದ್ದು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮೂಡುಗೋಪಾಡಿ, ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್ ಅವರ ನೇತೃತ್ವದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಕುಂದಾಪುರ ಡಿ.ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.

Koteshwara kotilineshwara temple inside -Kodihabba  (1)Koteshwara kotilineshwara temple inside -Kodihabba  (2)Koteshwara kotilineshwara temple inside -Kodihabba  (3)Koteshwara kotilineshwara temple inside -Kodihabba  (4)Koteshwara kotilineshwara temple inside -Kodihabba  (5)Koteshwara kotilingeshwara temple - Kodihabba Kundapura  (35)Koteshwara kotilingeshwara temple - Kodihabba Kundapura  (36)Koteshwara kotilingeshwara temple - Kodihabba Kundapura  (37)Koteshwara kotilingeshwara temple - Kodihabba Kundapura  (38)Koteshwara kotilingeshwara temple - Kodihabba Kundapura  (39)Koteshwara kotilingeshwara temple - Kodihabba Kundapura  (40)Koteshwara kotilingeshwara temple - Kodihabba Kundapura  (41)Koteshwara kotilingeshwara temple - Kodihabba Kundapura  (42)Koteshwara kotilingeshwara temple - Kodihabba Kundapura  (2)Koteshwara kotilingeshwara temple - Kodihabba Kundapura  (7)Koteshwara kotilingeshwara temple - Kodihabba Kundapura  (6)Koteshwara kotilingeshwara temple - Kodihabba Kundapura  (5)Koteshwara kotilingeshwara temple - Kodihabba Kundapura  (4)Koteshwara kotilingeshwara temple - Kodihabba Kundapura  (8)Koteshwara kotilingeshwara temple - Kodihabba Kundapura  (9)Koteshwara kotilingeshwara temple - Kodihabba Kundapura  (10)Koteshwara kotilingeshwara temple - Kodihabba Kundapura  (11)Koteshwara kotilingeshwara temple - Kodihabba Kundapura  (12)Koteshwara kotilingeshwara temple - Kodihabba Kundapura  (13)Koteshwara kotilingeshwara temple - Kodihabba Kundapura  (14)Koteshwara kotilingeshwara temple - Kodihabba Kundapura  (15)Koteshwara kotilingeshwara temple - Kodihabba Kundapura  (16)Koteshwara kotilingeshwara temple - Kodihabba Kundapura  (17)Koteshwara kotilingeshwara temple - Kodihabba Kundapura  (18)Koteshwara kotilingeshwara temple - Kodihabba Kundapura  (25)Koteshwara kotilingeshwara temple - Kodihabba Kundapura  (24)Koteshwara kotilingeshwara temple - Kodihabba Kundapura  (23)Koteshwara kotilingeshwara temple - Kodihabba Kundapura  (22)Koteshwara kotilingeshwara temple - Kodihabba Kundapura  (21)Koteshwara kotilingeshwara temple - Kodihabba Kundapura  (20)Koteshwara kotilingeshwara temple - Kodihabba Kundapura  (19)Koteshwara kotilingeshwara temple - Kodihabba Kundapura  (31)Koteshwara kotilingeshwara temple - Kodihabba Kundapura  (34)Koteshwara kotilingeshwara temple - Kodihabba Kundapura  (33)Koteshwara kotilingeshwara temple - Kodihabba Kundapura  (32)

Click here

Click here

Click here

Click Here

Call us

Call us

Leave a Reply