ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸದಾಶಿವ ಖಾರ್ವಿ ಮತ್ತು ಉಪಾಧ್ಯಕ್ಷರಾಗಿ ಸೂರಜ್ ಖಾರ್ವಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಎಂ.ಸಿ. ಸ್ವಾಮಿ ನೇತೃತ್ವದಲ್ಲಿ ಸಂಘದ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಸೋಮವಾರ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ನಿರ್ದೇಶಕರಾದ ಚಂದ್ರ ಖಾರ್ವಿ, ಮೋಹನ ಖಾರ್ವಿ, ಸುಶೀಲ ಖಾರ್ವಿ, ರಾಘವೇಂದ್ರ ಖಾರ್ವಿ, ಮಹೇಶ ಖಾರ್ವಿ, ರೋಹಿತ್ ಎ.ಕೆ., ಸುಮತಿ, ಉಷಾ ಖಾರ್ವಿ, ಭಾರತಿ, ವ್ಯವಸ್ಥಾಪಕ ಮೋಹನ ಖಾರ್ವಿ ಉಪಸ್ಥಿತರಿದ್ದರು. ಕಳೆದ ಅವಧಿಯಲ್ಲಿ ಸದಾಶಿವ ಖಾರ್ವಿ ಅವರು ಅಧ್ಯಕ್ಷರಾಗಿ ಮತ್ತು ಸೂರಜ್ ಖಾರ್ವಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2024-25 ರಿಂದ 2026-30ನೇ ಸಾಲಿನ ಐದು ವರ್ಷದ ಸಂಘದ ಆಡಳಿತ ಮಂಡಳಿಯ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿತ್ತು. ಸಾಮಾನ್ಯ ಸ್ಥಾನದಿಂದ ಸದಾಶಿವ ಖಾರ್ವಿ, ಚಂದ್ರ ಖಾರ್ವಿ, ಮೋಹನ ಖಾರ್ವಿ, ಸುಶೀಲ ಖಾರ್ವಿ, ರಾಘವೇಂದ್ರ ಖಾರ್ವಿ, ಮಹೇಶ ಖಾರ್ವಿ, ರೋಹಿತ್ ಎ.ಕೆ., ಪ.ಜಾತಿ ಸ್ಥಾನದಿಂದ ಸುಮತಿ, ಹಿಂದುಳಿದ ವರ್ಗ ’ಎ’ ಸ್ಥಾನದಿಂದ ಸೂರಜ್ ಖಾರ್ವಿ ಹಾಗೂ ಮಹಿಳಾ ಸ್ಥಾನದಿಂದ ಉಷಾ ಖಾರ್ವಿ ಮತ್ತು ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.










